ADVERTISEMENT

ಹಾಟ್ ಮತ್ತು ಬೋಲ್ಡ್‌ ರಚಿತಾ!

​ಪ್ರಜಾವಾಣಿ ವಾರ್ತೆ
Published 28 ಮೇ 2019, 9:03 IST
Last Updated 28 ಮೇ 2019, 9:03 IST
‘ಐ ಲವ್‌ ಯೂ’ ಚಿತ್ರದಲ್ಲಿ ರಚಿತಾ ರಾಮ್‌ ಮತ್ತು ಉಪೇಂದ್ರ
‘ಐ ಲವ್‌ ಯೂ’ ಚಿತ್ರದಲ್ಲಿ ರಚಿತಾ ರಾಮ್‌ ಮತ್ತು ಉಪೇಂದ್ರ   

ನಟಿ ರಚಿತಾ ರಾಮ್ ಅವರು ಇದುವರೆಗೆ ‘ಇಷ್ಟೊಂದು’ ಬೋಲ್ಡ್‌ ಆಗಿ ಕಾಣಿಸಿರಲಿಲ್ಲವಂತೆ. ಆದರೆ ಈ ಚಿತ್ರದಲ್ಲಿ ಮಾತ್ರ ಸಖತ್ ‘ಬೋಲ್ಡ್’ ಆಗಿ ಕಾಣಿಸುತ್ತಿದ್ದಾರಂತೆ!

ಹೌದು, ಉಪೇಂದ್ರ ಅಭಿನಯದ ‘ಐ ಲವ್ ಯೂ’ ಚಿತ್ರದಲ್ಲಿ ರಚಿತಾ ರಾಮ್ ಅವರು ದೃಶ್ಯವೊಂದರಲ್ಲಿಬೋಲ್ಡ್ ಆಗಿ ಅಭಿನಯಿಸಿದ್ದಾರೆ. ಚಿತ್ರದ ನಿರ್ದೇಶಕ ಆರ್. ಚಂದ್ರು ಅವರ ಪ್ರಕಾರ ಇದು ‘ಎರಾಟಿಕ್’ ಆಗಿರುವ ದೃಶ್ಯ. ಚಿತ್ರದ ಕಥೆ ಕೇಳಿದ ನಂತರ ರಚಿತಾ ಅವರೇ ತಾವು ಈ ದೃಶ್ಯವನ್ನು ನಿಭಾಯಿಸುವುದಾಗಿ ಭರವಸೆ ನೀಡಿದರು.

ಇದನ್ನು ಚಂದ್ರು ಅವರು ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಬಹಿರಂಗಪಡಿಸಿದರು. ‘ರಚಿತಾ ಅವರು ಹಾಟ್‌ ಆಗಿಯೂ ಗ್ಲಾಮರಸ್‌ ಆಗಿಯೂ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ’ ಎಂದರು ಉಪೇಂದ್ರ. ಅವರ ಮಾತಿನಲ್ಲಿ ‘ರಚಿತಾ ಅವರು ಇದನ್ನು ಸಿನಿಮಾಕ್ಕಾಗಿ ಮಾಡಿದ್ದಾರೆ.’

ADVERTISEMENT

ಚಿತ್ರದಲ್ಲಿನ ಹಾಟ್‌ ಮತ್ತು ಬೋಲ್ಡ್‌ ಸೀನ್‌ಗಳು ಏನಿರಬಹುದು ಎಂಬುದನ್ನು ಟ್ರೇಲರ್‌ನಲ್ಲಿ ಒಂಚೂರು ನೋಡಬಹುದು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.