ಹೃತಿಕ್ ರೋಷನ್ ಅವರ ಬಹುನಿರೀಕ್ಷಿತ, ಕುತೂಹಲಭರಿತ ‘ಕ್ರಿಶ್ 4’ ಸಿನಿಮಾದ ಚಿತ್ರಕತೆಯು ಅಂತಿಮ ಹಂತದಲ್ಲಿದೆಯಂತೆ.
ಈಚೆಗೆ ಸಂದರ್ಶನವೊಂದರಲ್ಲಿ ಹೃತಿಕ್ ‘ಕ್ರಿಶ್’ ಸರಣಿಯ ನಾಲ್ಕನೇ ಚಿತ್ರ ಸದ್ಯದಲ್ಲೇ ಸೆಟ್ಟೇರುವ ಬಗ್ಗೆ ಸುಳಿವು ನೀಡಿದ್ದು, ‘ಪೂರ್ವ ತಯಾರಿ ನಡೆಯುತ್ತಿದೆ. ಚಿತ್ರಕತೆ ಅಂತಿಮ ಹಂತದಲ್ಲಿದೆ’ ಎಂದು ಹೇಳಿದ್ದಾರೆ.
ಈ ಸಿನಿಮಾ 2020ರ ಕ್ರಿಸ್‌ಮಸ್‌ದಂದು ಬಿಡುಗಡೆಯಾಗಲಿದೆ ಎಂದು ಕಳೆದ ವರ್ಷ ರಾಕೇಶ್ ರೋಶನ್ ಪ್ರಕಟಿಸಿದ್ದರು. ಅದೇ ದಿನ ಅಮೀರ್ ಖಾನ್ ಅವರ ‘ಲಾಲ್ ಸಿಂಗ್ ಛಡ್ಡಾ’, ಅಕ್ಷಯ್ ಕುಮಾರ್ ಅವರ ‘ಬಚ್ಚನ್ ಪಾಂಡೆ’, ಲವ್ ರಂಜನ್ ನಿರ್ದೇಶನದ ಹೊಸ ಚಿತ್ರಸೇರಿದಂತೆಒಟ್ಟು ನಾಲ್ಕು ಸಿನಿಮಾ ಬಿಡುಗಡೆಯಾಗುತ್ತಿವೆ.ಹಾಗಾಗಿ ಸಿನಿಮಾ ಬಿಡುಗಡೆ ದಿನಾಂಕವನ್ನು ಮುಂದೂಡಲು ಹೃತಿಕ್ ನಿರ್ಧಾರ ಮಾಡಿದ್ದಾರೆ.
‘ಕ್ರಿಶ್ 4’ಗಿಂತ ಮುಂಚೆ ಮತ್ತೊಂದು ಸಿನಿಮಾದ ಕೆಲಸ ಪೂರ್ಣಗೊಳಿಸಬೇಕಾಗಿದೆ. ಹಾಗಾಗಿ ಕ್ರಿಶ್ 4 ಬಿಡುಗಡೆ ದಿನಾಂಕವನ್ನು ಮುಂದೂಡಲಾಗುತ್ತದೆ’ ಎಂದು ಹೇಳಿದ್ದಾರೆ.
ಹೃತಿಕ್ ಅಭಿನಯದ ‘ಸೂಪರ್ 30 ’ಸಿನಿಮಾವು ಬಾಕ್ಸಾಫೀಸಿನಲ್ಲಿ ಹಿಟ್ ಆಗಿದೆ. ಹಾಗೆಯೇ ಅವರ ನಟನೆಗೆ ಪ್ರಶಂಸೆ ವ್ಯಕ್ತವಾಗಿದೆ. ‘ಬಾಕ್ಸಾಫೀಸ್ ನಂಬರಿಗಿಂತ ಮೆಚ್ಚುಗೆಯೇ ದೊಡ್ಡದು’ ಎಂದು ಖುಷಿ ಹಂಚಿಕೊಂಡಿದ್ದಾರೆ. ಈ ಸಿನಿಮಾ ₹ 128 ಕೋಟಿ ಗಳಿಕೆ ಮಾಡಿದೆ.
ಟೈಗರ್ ಶ್ರಾಫ್ ಹಾಗೂ ಹೃತಿಕ್ ನಟಿಸಿರುವ ‘ವಾರ್’ ಸಿನಿಮಾ ಅಕ್ಟೋಬರ್ 2ರಂದು ಬಿಡುಗಡೆಯಾಗುತ್ತಿದೆ.
ಇನ್ನು ಹೃತಿಕ್ ಕೈಯಲ್ಲಿ 3–4 ಸಿನಿಮಾಗಳಿವೆ. ಅಮಿತಾಭ್ ಬಚ್ಚನ್ ನಟನೆಯ ‘ಸತ್ತೇ ಪೆ ಸತ್ತಾ’ ರಿಮೇಕ್‌ನಲ್ಲೂ ಅವರು ನಟಿಸುತ್ತಿದ್ದಾರೆ. ಹಾಗೇ ಆನಂದ್ ಎಲ್. ರಾಯ್ ಅವರ ಮುಂದಿನ ಚಿತ್ರದಲ್ಲೂ ನಾಯಕನಾಗಿ ಆಯ್ಕೆಯಾಗಿದ್ದಾರಂತೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.