ADVERTISEMENT

ದಿಗಂತ್‌ ‘ಹುಟ್ಟು ಹಬ್ಬದ ಶುಭಾಷಯ’ಗಳು

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2019, 11:44 IST
Last Updated 30 ಏಪ್ರಿಲ್ 2019, 11:44 IST
ದಿಗಂತ್
ದಿಗಂತ್   

ನಟ ದಿಗಂತ್‌ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಂತರ ಸಿನಿಮಾಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿರಲಿಲ್ಲ. ಕಳೆದ ವರ್ಷ ‘ಕಥೆಯೊಂದು ಶುರುವಾಗಿದೆ’ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದೇ ಕೊನೆ.ಈಗ ‘ಹುಟ್ಟು ಹಬ್ಬದ ಶುಭಾಶಯಗಳು’ ಸಿನಿಮಾ ಮೂಲಕ ಪ್ರೇಕ್ಷಕ ಮನಗೆಲ್ಲಲು ಗುಳಿಕೆನ್ನೆಯ

ಸಿನಿಮಾದಲ್ಲಿ ನಾಯಕನಾಗಿ ಅವರು ಅಭಿನಯಿಸಲಿದ್ದಾರೆ. ಈ ಸಿನಿಮಾದಲ್ಲಿ ದಿಗಂತ್‌ಗೆ ನಾಯಕಿಯರು ಯಾರಾಗಲಿದ್ದಾರೆ ಎನ್ನುವ ಕುತೂಹಲಕ್ಕೂ ತೆರೆಬಿದ್ದಿದ್ದು, ಈ ಸಿನಿಮಾದಲ್ಲಿ ಮೂವರು ನಾಯಕಿಯರು ಅಭಿನಯಿಸಲಿದ್ದಾರಂತೆ. ಕವಿತಾ ಗೌಡ ನಾಯಕಿಯಾಗಿ ಆಯ್ಕೆಯಾಗಲಿದ್ದು, ಇನ್ನಿಬ್ಬರು ನಾಯಕಿಯರನ್ನಾಗಿ ಕಿರುತೆರೆಯ ಕಲಾವಿದೆಯರನ್ನು ಹೊಸ ಮುಖಗಳಾಗಿ ಪರಿಚಯಿಸಲಾಗುತ್ತಿದೆಯಂತೆ. ‘ರಾಜಾಹುಲಿ’ ಖ್ಯಾತಿಯ ಗಿರಿ ಸೇರಿದಂತೆ ಹಾಸ್ಯ ಕಲಾವಿದರ ದೊಡ್ಡ ದಂಡೇ ಈ ಸಿನಿಮಾದಲ್ಲಿ ಇರಲಿದೆಯಂತೆ.

ಕ್ರಿಸ್ಟಲ್ ಪಾರ್ಕ್ ಸಿನಿಮಾಸ್ ಬ್ಯಾನರ್‌ನಡಿ ಟಿ.ಆರ್.ಚಂದ್ರಶೇಖರ್ ನಿರ್ಮಿಸಲಿರುವ ಈ ಸಿನಿಮಾ ಸದ್ಯದಲ್ಲೇ ಸೆಟ್ಟೇರಲಿದ್ದು, ಬನಶಂಕರಿಯ ಧರ್ಮಗಿರಿ ಮಂಜುನಾಥಸ್ವಾಮಿದೇವಾಲಯದಲ್ಲಿ ಇದೇಬುಧವಾರ (ಮೇ 1) ಮುಹೂರ್ತ ನಡೆಯಲಿದೆ.

ADVERTISEMENT

ಇದುಕಾಮಿಡಿ ಮತ್ತು ಥ್ರಿಲ್ಲರ್ ಜಾನರ್‌ ಸಿನಿಮಾ.ಆ್ಯಕ್ಷನ್‌ ಕಟ್‌ ಹೇಳಲಿರುವನಾಗರಾಜ್ ಬೇತೂರ್ ಅವರಿಗೆ ಇದುಚೊಚ್ಚಲ ನಿರ್ದೇಶನದ ಚಿತ್ರ. ‘ಒಂದು ಮೊಟ್ಟೆಯ ಕಥೆ’ ಚಿತ್ರಕ್ಕೆ ಸಂಗೀತ ನೀಡಿದ್ದ ಮಿಧುನ್ ಮುಕುಂದನ್ ಸಂಗೀತ ನೀಡಲಿದ್ದಾರೆ. ಚಿತ್ರದ ಟೈಟಲ್ ಪೋಸ್ಟರ್‌ ಕೂಡ ಬಿಡುಗಡೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.