ADVERTISEMENT

ನಾನು ‘ವೇಸ್ಟ್ ಲೇಡಿ’: ಶ್ರುತಿ ಹಾಸನ್‌

​ಪ್ರಜಾವಾಣಿ ವಾರ್ತೆ
Published 27 ಮೇ 2020, 5:34 IST
Last Updated 27 ಮೇ 2020, 5:34 IST
   

ಈ ಲಾಕ್‌ಡೌನ್ ಅವಧಿಯಲ್ಲಿ ಸಿನಿತಾರೆಯರು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸಕ್ರೀಯರಾಗಿದ್ದಾರೆ. ಇನ್ಸ್‌ಸ್ಟಾಗ್ರಾಂ, ಫೇಸ್‌ಬುಕ್‌, ಟ್ವಿಟರ್‌ ಖಾತೆಯಲ್ಲಿ ಲಾಕ್‌ಡೌನ್‌ ಅವಧಿಯಲ್ಲಿನ ಆಗು–ಹೋಗುಗಳ ಬಗ್ಗೆ ಒಂದಿಲ್ಲೊಂದು ಪೋಸ್ಟ್‌ ಹಾಗೂ ವಿಡಿಯೊಗಳನ್ನು ಅಪ್‌ಲೋಡ್‌ ಮಾಡುತ್ತಲೇ ಇರುತ್ತಾರೆ. ಆ ಮೂಲಕ ಅಭಿಮಾನಿಗಳಿಗೆ ಇನ್ನಷ್ಟು ಹತ್ತಿರವಾಗಿದ್ದಾರೆ.

ಇದಕ್ಕೆ ನಟಿ ಶ್ರುತಿ ಹಾಸನ್‌ ಕೂಡ ಹೊರತಾಗಿಲ್ಲ. ಮನೆಯಲ್ಲಿಯೇ ಸಮಯ ಕಳೆಯುತ್ತಿರುವ ಈ ಬೆಡಗಿ ತಮ್ಮ ದಿನಚರಿಯಲ್ಲಿನ ಕೆಲವು ಭಾಗಗಳನ್ನು ಇನ್ಸ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.

ಇತ್ತೀಚೆಗೆ ಜಿಮ್‌ ಡ್ರೆಸ್‌ನಲ್ಲಿದ್ದ ಫೋಟೊವೊಂದನ್ನು ಹಂಚಿಕೊಂಡಿರುವ ಇವರು ತನ್ನನ್ನು ತಾನು ‘ವೇಸ್ಟ್‌ ಲೇಡಿ’ ಎಂದು ಕರೆದುಕೊಂಡಿದ್ದಾರೆ. ಇನ್ಸ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿರುವ ಆ ಫೋಟೊದೊಂದಿಗೆ ‘ಇವತ್ತು ನಾನು ಒಂದು ಗಂಟೆಗಳ ಕಾಲ ದೇಹದಂಡನೆ ಮಾಡಿದ್ದನ್ನು ಹೊರತುಪಡಿಸಿ ಬೇರೇನೂ ಮಾಡಿಲ್ಲ. ನಾನು ನಿಜಕ್ಕೂ ‘ವೇಸ್ಟ್ ಲೇಡಿ’ ಎಂದು ಬರೆದುಕೊಂಡಿದ್ದರು.

ADVERTISEMENT

ಕಳೆದ ಕೆಲ ದಿನಗಳ ಹಿಂದೆ ‘ಮೆಗಾ ಕ್ಲೀನ್ ಡೇ‌’ ಹೆಸರಿನಲ್ಲಿ ಮನೆ ಸ್ವಚ್ಛ ಮಾಡಿರುವ ಚಿತ್ರವನ್ನು ಇನ್ಸ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. ಆಗ ಇಡೀ ಮನೆಯನ್ನು ಸ್ವಚ್ಛಗೊಳಿಸುವುದರ ಜೊತೆಗೆ ಡಾನ್ಸ್ ಮಾಡುವ ಮೂಲಕ ಎಂಜಾಯ್ ಮಾಡಿದ್ದರು.

ಅಂದು ಆಕೆ ಕಪ್ಪು ಬಣ್ಣದ ಟಾಪ್ ಧರಿಸಿ, ನೀಲಿ ಬಣ್ಣದ ರಬ್ಬರ್ ಗ್ಲೌಸ್‌ ಧರಿಸಿ ಡಾನ್ಸ್ ಮಾಡುತ್ತಿರುವ ವಿಡಿಯೊವನ್ನು ಇನ್ಸ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದರು. ಜೊತೆಗೆ ‘ಇವತ್ತು ಮೆಗಾ ಕ್ಲೀನ್ ಡೇ. ನನಗೆ ದಿನದಲ್ಲಿ ಒಂದು ಬಾರಿಯಾದರೂ ಡಾನ್ಸ್ ಮಾಡಿ ಅಭ್ಯಾಸ. ಆ ಕಾರಣಕ್ಕೆ ಮನೆ ಸ್ವಚ್ಛ ಮಾಡುವುದರ ಜೊತೆಗೆ ಡಾನ್ಸ್ ಮಾಡಿಕೊಂಡು ಎಂಜಾಯ್ ಮಾಡುತ್ತಿದ್ದೇನೆ’ ಎಂದು ಬರೆದುಕೊಂಡಿದ್ದರು.

ಅದಾದ ಕೆಲ ಹೊತ್ತಿನ ಬಳಿಕ ಮನೆಗೆಲಸ ಮಾಡುವ ಜೊತೆಗೆ ಪೆಚ್ಚು ಮೋರೆಯೊಂದಿಗೆ ನಗು ಬೀರುತ್ತಾ ‘ಇನ್ನೂ ಮನೆ ಸ್ವಚ್ಛ ಮಾಡುತ್ತಲೇ ಇದ್ದೇನೆ’ ಎಂದು ಬರೆದುಕೊಂಡಿದ್ದರು.

ಸದ್ಯ ತೆಲುಗು ‘ಕ್ರ್ಯಾಕ್’ ಹಾಗೂ ತಮಿಳಿನ ‘ಲಾಭಂ’ ಸಿನಿಮಾಗಳು ಆಕೆಯ ಕೈಯಲ್ಲಿವೆ. ಲಾಕ್‌ಡೌನ್ ಕಾರಣದಿಂದ ಶೂಟಿಂಗ್‌ಗೆ ಬ್ರೇಕ್ ಬಿದಿದ್ದು ಶೂಟಿಂಗ್‌ಗೆ ತೆರಳುವ ತವಕದಲ್ಲಿದ್ದಾರೆ ಶೃತಿ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.