ADVERTISEMENT

ಇಂಡಿಯನ್‌ 2: 85ರ ವೃದ್ಧೆ ಪಾತ್ರದಲ್ಲಿ ಕಾಜಲ್‌ ಅಗರ್‌ವಾಲ್‌

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2019, 6:28 IST
Last Updated 30 ಅಕ್ಟೋಬರ್ 2019, 6:28 IST
ಕಾಜಲ್ ಅಗರ್‌ವಾಲ್‌
ಕಾಜಲ್ ಅಗರ್‌ವಾಲ್‌   

ಕಮಲ್‌ಹಾಸನ್‌ ಅಭಿನಯದ ‘ಇಂಡಿಯನ್‌ 2’ ಸಿನಿಮಾದಲ್ಲಿ ಗ್ಲಾಮರ್‌ ಗೊಂಬೆ ಕಾಜಲ್ ಅಗರ್‌ವಾಲ್‌ ಎಂಬತ್ತೈದರ ವೃದ್ಧೆ ಪಾತ್ರದಲ್ಲಿ ನಟಿಸಲಿದ್ದಾರೆಂಬ ಸುದ್ದಿ ವ್ಯಾಪಕವಾಗಿದೆ.

ಬಾಹುಬಲಿಯಲ್ಲಿ ಅನುಷ್ಕಾ ಶೆಟ್ಟಿ ಅಮ್ಮನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದಕ್ಕಿಂತ ಒಂದು ಹೆಜ್ಜೆ ಮುಂದೆ ಇಟ್ಟಿರುವ ಕಾಜಲ್‌ ವೃದ್ಧೆಯ ಪಾತ್ರದಲ್ಲಿ ನಟಿಸಲು ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗಿದೆ. ಎರಡು ವಾರಗಳ ಹಿಂದೆ ಈ ಸಿನಿಮಾದಲ್ಲಿ ನಟ ಕಮಲಹಾಸನ್‌ 90 ವರುಷದ ವ್ಯಕ್ತಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸಂಗತಿ ಹೊರಬಿದ್ದಿತ್ತು. ಈ ಸಿನಿಮಾದ ಸ್ಟಂಟ್‌ ಕೊರಿಯೋಗ್ರಾಫರ್‌ ಪೀಟರ್‌ ಹೇನ್‌ ಈ ವಿಚಾರವನ್ನು ಸಂದರ್ಶನವೊಂದರಲ್ಲಿ ಬಾಯ್ಬಿಟ್ಟಿದ್ದರು.

ಸದಾ ಚಿರಯೌವನ ಪಾತ್ರದಲ್ಲಿ ಕಾಣಿಸಿಕೊಳ್ಳಬೇಕೆಂಬ ಅಲಿಖಿತ ನಿಯಮವನ್ನು ಮುರಿದಿರುವ ಅವರು ಶಂಕರ್‌ ನಿರ್ದೇಶನದ ಬಹುನಿರೀಕ್ಷಿತ ಸಿನಿಮಾ ಇಂಡಿಯನ್‌ 2ರಲ್ಲಿ ಸೇನಾಪತಿಯ ಪತ್ನಿ ಅಮೃತವಲ್ಲಿಯಾಗಿ ನಟಿಸಲಿದ್ದಾರೆ ಎನ್ನಲಾಗಿದೆ.

ADVERTISEMENT

‘ಇಂಡಿಯನ್‌ 2’ನಲ್ಲಿ ಬಹುತಾರಗಣವೇ ಇದ್ದು, ಸಿದ್ದಾರ್ಥ್‌, ರಾಹುಲ್‌ ಪ್ರೀತ್‌ ಸಿಂಗ್‌, ಪ್ರಿಯಾ ಭವಾನಿ ಶಂಕರ್‌, ಬಾಬಿ ಸಿಂಹ, ವಿವೇಕಾ, ವೆನ್ನೆಲಾ ಕಿಶೋರ್‌ ನಟಿಸಲಿದ್ದಾರೆ. ಲೈಖಾ ನಿರ್ಮಾಣ ಸಂಸ್ಥೆಯಡಿ ಈ ಸಿನಿಮಾ ತಯಾರಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.