ADVERTISEMENT

‘ಐರಾವನ್‌’ ಕೊನೆಯ ಸಿನಿಮಾಗಳಲ್ಲೊಂದು: ಕಾರ್ತಿಕ್‌ ಜಯರಾಂ ಹೀಗಂದಿದ್ದು ಏಕೆ?

​ಪ್ರಜಾವಾಣಿ ವಾರ್ತೆ
Published 6 ಜೂನ್ 2023, 19:41 IST
Last Updated 6 ಜೂನ್ 2023, 19:41 IST
ಕಾರ್ತಿಕ್‌ ಜಯರಾಮ್‌ 
ಕಾರ್ತಿಕ್‌ ಜಯರಾಮ್‌    

ಕನ್ನಡ ಹಾಗೂ ಹಿಂದಿ ಕಿರುತೆರೆಯಲ್ಲಿ ಮಿಂಚಿ, ಚಂದನವನಕ್ಕೆ ಕಾಲಿಟ್ಟಿದ್ದ ನಟ ಕಾರ್ತಿಕ್‌ ಜಯರಾಮ್‌(ಜೆಕೆ) ನಟನೆಯ ‘ಐರಾವನ್‌’ ಸಿನಿಮಾ ಜೂನ್‌ 16ರಂದು ಬಿಡುಗಡೆಯಾಗುತ್ತಿದೆ.

ಸಿನಿಮಾ ಬಿಡುಗಡೆ ಹೊಸ್ತಿಲಲ್ಲೇ ಚಿತ್ರರಂಗದಿಂದಲೇ ದೂರವಿರುವ ಮಾತುಗಳನ್ನು ಆಡಿದ್ದಾರೆ ಜೆಕೆ. ‘ಐರಾವನ್‌’ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅವಕಾಶಗಳು ಸಿಕ್ಕಿದಾಗ ಅದಕ್ಕೆ ಕೆಲವರು ಅಡ್ಡಬಂದರು. ಅವಕಾಶ ಕೊಡದೇ ಇದ್ದರೂ ತೊಂದರೆ ಇಲ್ಲ ತುಳಿಯಬೇಡಿ. ದಿನದ ಕೊನೆಯಲ್ಲಿ ಮನಸ್ಸು ನಿಶ್ಚಿಂತೆಯಿಂದ ಇರಬೇಕು ಎಂಬುವುದಷ್ಟೇ ನನ್ನ ಬಯಕೆ. ಹಿಂದಿ ಧಾರಾವಾಹಿಗಳನ್ನು ಪೂರ್ಣಗೊಳಿಸಿ, ಕನ್ನಡ ಮಣ್ಣಿನಲ್ಲಿ ಕನ್ನಡ ಸಿನಿಮಾ ಮಾಡಬೇಕು ಎಂದು ಹಲವು ಹೊಸ ಹಿಂದಿ ಧಾರಾವಾಹಿಗಳ ಅವಕಾಶಗಳನ್ನು ತಿರಸ್ಕರಿಸಿ ಮರಳಿ ಬಂದೆ. ಆದರೆ ನನಗೆ ಸೂಕ್ತ ಬೆಂಬಲ ಸಿಗಲಿಲ್ಲ. ಹೀಗಾಗಿ ದೂರ ಉಳಿಯಲು ನಿರ್ಧರಿಸಿದ್ದೇನೆ. ಐರಾವನ್‌ ಹಾಗೂ ಮತ್ತೊಂದು ಸಿನಿಮಾ ಮಾಡಿದ್ದೇನೆ. ಅದುವೇ ಕೊನೆ. ಎರಡೂ ಸಿನಿಮಾಗಳಿಗೂ ಶೇ 100 ಪರಿಶ್ರಮ ಹಾಕಿದ್ದೇನೆ’ ಎಂದರು. 

ಐರಾವನ್‌ಗೆ ರಾಮ್ಸ್ ರಂಗ ಆ್ಯಕ್ಷನ್‌ ಕಟ್‌ ಹೇಳಿದ್ದು, ನಿರಂತರ ಗಣೇಶ್ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ‘ಇದು ಹಿಂದಿ ಚಿತ್ರವೇ ಎಂಬ ಗೊಂದಲ ಹಲವರಿಗೆ ಇತ್ತು. ಇದು ಖಂಡಿತಾ ಕನ್ನಡ ಸಿನಿಮಾ. ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಹೊಂದಿದೆ. ಎರಡು ಶೇಡ್‌ಗಳಲ್ಲಿ ನನ್ನ ಪಾತ್ರವಿದೆ’ ಎನ್ನುತ್ತಾರೆ ಜೆಕೆ. ಜೆಕೆಗೆ ಜೋಡಿಯಾಗಿ ಅದ್ವಿತಿ ಶೆಟ್ಟಿ ನಟಿಸಿದ್ದಾರೆ. 

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.