ಬಹುತೇಕ ಹೊಸಬರಿಂದಲೇ ಕೂಡಿರುವ ‘ಜೊತೆಯಾಗಿ ಹಿತವಾಗಿ’ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಇತ್ತೀಚೆಗೆ ಬಿಡುಗಡೆಯಾಗಿದೆ. ಎ.ಆರ್.ಕೃಷ್ಣ ಕಥೆ ಬರೆದು ನಿರ್ದೇಶಿಸಿದ್ದಾರೆ.
‘ಪ್ರೇಮ ಕಥೆ ಹೊಂದಿರುವ ಚಿತ್ರವಿದು. ಮನೆಯಲ್ಲಿ ಅತಿಯಾದ ಸ್ವತಂತ್ರ ಇದ್ದರೆ ಅಥವಾ ತುಂಬ ಕಡಿವಾಣ ಹಾಕಿದರೆ ಮಕ್ಕಳು ಏನಾಗುತ್ತಾರೆ ಎಂಬುದನ್ನು ತೋರಿಸಿದ್ದೇವೆ. ನಮ್ಮ ಚಿತ್ರದ ನಾಯಕ ರಾಜ್‌ಕುಮಾರ್ ಕುಟುಂಬದ ಅಭಿಮಾನಿ. ಹೀಗಾಗಿ ಶಿವರಾಜ್‌ಕುಮಾರ್ ಅವರ ‘ಆನಂದ್’ ಸಿನಿಮಾದ ಹಾಡಿನಲ್ಲಿರುವ ಸಾಲನ್ನೇ ಶೀರ್ಷಿಕೆಯಾಗಿಸಿದ್ದೇವೆ’ ಎಂದರು ನಿರ್ದೇಶಕರು.
ಅಗಸ್ತ್ಯ ಚಿತ್ರದ ನಾಯಕ. ಸುವಾರ್ತಾ ನಾಯಕಿ. ಆನಂದ್ ನೀನಾಸಂ, ಚೇತನ್ ದುರ್ಗಾ, ಬಳ್ಳಾರಿ ಅರ್ಜುನ್, ಸಲೋಮಿ ಡಿಸೋಜ, ಭೂಮಿಕಾ ದೇಶಪಾಂಡೆ ಮುಂತಾದವರು ಚಿತ್ರದಲ್ಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.