ADVERTISEMENT

ಅಟ್ಲಿ ಚಿತ್ರದಲ್ಲಿ ಜ್ಯೂ.ಎನ್‌ಟಿಆರ್‌

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2019, 19:30 IST
Last Updated 30 ಸೆಪ್ಟೆಂಬರ್ 2019, 19:30 IST
   

ನಿರ್ದೇಶಕ ಅಟ್ಲಿ ಅವರ ಮುಂದಿನ ಚಿತ್ರದಲ್ಲಿ ನಟ ಜ್ಯೂನಿಯರ್‌ ಎನ್‌ಟಿಆರ್‌ ನಾಯಕನಾಗಿ ನಟಿಸಲಿದ್ದಾರೆ.

ಸದ್ಯ ಜ್ಯೂ. ಎನ್‌ಟಿಆರ್‌ ‘ಆರ್‌ಆರ್‌ಆರ್‌’ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದು, ಈಗ ಮತ್ತೊಂದು ಬಿಗ್‌ ಬಜೆಟ್‌ ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ಇದು ಕಮರ್ಷಿಯಲ್‌ ಎಂಟರ್‌ಟೇನ್‌ಮೆಂಟ್ ಸಿನಿಮಾ ಎನ್ನಲಾಗಿದೆ.ಈ ಚಿತ್ರವನ್ನು ಮೈತ್ರಿ ಮೂವಿ ಮೇಕರ್ಸ್‌ ಹಾಗೂ ಅಶ್ವಿನಿ ದತ್‌ ವೈಜಯಂತಿ ಮೂವೀಸ್‌ ನಿರ್ಮಾಣ ಮಾಡುತ್ತಿದೆ. ತಮಿಳು ಹಾಗೂ ತೆಲುಗು ಭಾಷೆಯಲ್ಲಿ ಚಿತ್ರೀಕರಣ ನಡೆಸಲಾಗುತ್ತದೆ.

‘ಆರ್‌ಆರ್‌ಆರ್‌’ ಚಿತ್ರದಲ್ಲಿ ಜ್ಯೂ.ಎನ್‌ಟಿಆರ್‌ ಅವರ ಜೊತೆ ನಾಯಕಿಯಾಗಿ ನಟಿ ಆಲಿಯಾ ಭಟ್‌ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಅಜಯ್‌ ದೇವಗನ್‌ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರ ಮುಂದಿನ ವರ್ಷಕ್ಕೆ ಬಿಡುಗಡೆಯಾಗಲಿದೆ.ಇನ್ನೊಂದೆಡೆ ಅಟ್ಲಿ ಅವರು ವಿಜಯ್‌ ಅಭಿನಯದ ‘ಬಿಗಿಲ್‌’ ನಿರ್ದೇಶನದಲ್ಲಿ ತೊಡಗಿಸಿಕೊಂಡಿದ್ದಾರೆ. ಕ್ರೀಡಾ ಸಂಬಂಧಿ ಕತೆ ಹೊಂದಿರುವ ಈ ಚಿತ್ರ ಅಕ್ಟೋಬರ್‌ 27ರಂದು ಬಿಡುಗಡೆಯಾಗಲಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.