ADVERTISEMENT

ಫೆಬ್ರವರಿಯಲ್ಲಿ ಸೆಟ್ಟೇರುತ್ತಿದೆ ಜೂನಿಯರ್ ಎನ್‌ಟಿಆರ್ 30ನೇ ಚಿತ್ರ

ಐಎಎನ್ಎಸ್
Published 1 ಜನವರಿ 2023, 13:37 IST
Last Updated 1 ಜನವರಿ 2023, 13:37 IST
   

ಹೈದರಾಬಾದ್: ಜೂನಿಯರ್ ಎನ್‌ಟಿಆರ್ ಮುಖ್ಯ ಭೂಮಿಕೆಯಲ್ಲಿರುವ 'ಎನ್‌ಟಿಆರ್ 30' ಚಿತ್ರ ಫೆಬ್ರವರಿಯಲ್ಲಿ ಸೆಟ್ಟೇರಲು ಸಿದ್ಧವಾಗಿದೆ. ಇನ್ನೂ ಹೆಸರಿಡದ ಚಿತ್ರ, 2024 ರ ಏಪ್ರಿಲ್‌ನಲ್ಲಿ ವಿಶ್ವದಾದ್ಯಂತ ಬಿಡುಗಡೆಯಾಗುವ ನಿರೀಕ್ಷೆಯಿದೆ.

‘ಆರ್‌ಆರ್‌ಆರ್‌’ನಲ್ಲಿ ಕೊಮರಂ ಭೀಮ್ ಪಾತ್ರದಲ್ಲಿ ಪ್ರೇಕ್ಷಕರ ಮನ ಗೆದ್ದಿದ್ದ ಜೂನಿಯರ್ ಎನ್‌ಟಿಆರ್‌ ಅವರ ಬಹು ನಿರೀಕ್ಷಿತ ಚಿತ್ರಕ್ಕೆ ಕೊರಟಾಲ ಶಿವ ಆ್ಯಕ್ಷನ್‌ ಕಟ್‌ ಹೇಳುತ್ತಿದ್ದು, ಕೊರಟಾಲ ಮತ್ತು ಜೂನಿಯರ್ ಎನ್‌ಟಿಆರ್ ಬಹಳ ಸಮಯದ ನಂತರ ಮತ್ತೆ ಒಂದಾಗುತ್ತಿದ್ದಾರೆ.

ಕಮಲ್ ಹಾಸನ್ ಅಭಿನಯದ 'ವಿಕ್ರಮ್' ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದ ಅನಿರುದ್ಧ್ ರವಿಚಂದರ್ ಈ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ. ಎನ್‌ಟಿಆರ್ ಆರ್ಟ್ಸ್ ಮತ್ತು ಯುವಸುಧಾ ಆರ್ಟ್ಸ್ ಬ್ಯಾನರ್‌ನಲ್ಲಿ ಹರಿಕೃಷ್ಣ ಕೆ. ಮತ್ತು ಸುಧಾಕರ್ ಮಿಕ್ಕಿಲಿನೇನಿ ನಿರ್ಮಿಸಿರುವ ಈ ಚಿತ್ರವನ್ನು ನಂದಮೂರಿ ಕಲ್ಯಾಣ್ ರಾಮ್ ಪ್ರಸ್ತುತಪಡಿಸುತ್ತಿದ್ದಾರೆ.

ADVERTISEMENT


ಚಿತ್ರದ ಪಾತ್ರವರ್ಗದ ಕುರಿತು ಮಾಹಿತಿ ಲಭಿಸಿಲ್ಲ. ರತ್ನವೇಲು ಛಾಯಾಗ್ರಹಣ, ಶ್ರೀಕರ್ ಪ್ರಸಾದ್ ಸಂಕಲನ ಚಿತ್ರಕ್ಕಿರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.