ADVERTISEMENT

Kaatera | ಡಿ.16ಕ್ಕೆ ‘ಕಾಟೇರ’ ಟ್ರೈಲರ್‌ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2023, 23:30 IST
Last Updated 14 ಡಿಸೆಂಬರ್ 2023, 23:30 IST
ದರ್ಶನ್‌ ಹಾಗೂ ಆರಾಧನಾ 
ದರ್ಶನ್‌ ಹಾಗೂ ಆರಾಧನಾ    

ನಟ ದರ್ಶನ್‌ ಅಭಿನಯದ, ತರುಣ್‌ ಸುಧೀರ್‌ ನಿರ್ದೇಶಿಸಿರುವ ‘ಕಾಟೇರ’ ಸಿನಿಮಾ ಡಿ.29ರಂದು ತೆರೆಕಾಣುತ್ತಿದ್ದು, ಚಿತ್ರದ ಟ್ರೈಲರ್‌ ಡಿ.16ರಂದು ಬಿಡುಗಡೆಯಾಗಲಿದೆ. 

ಈಗಾಗಲೇ ಚಿತ್ರದ ‘ಪಸಂದಾಗವ್ನೆ’ ಹಾಗೂ ‘ಯಾವ ಜನುಮದ ಗೆಳತಿ’ ಎಂಬ ಎರಡು ಹಾಡುಗಳು ಬಿಡುಗಡೆಯಾಗಿವೆ. ರಾಕ್‌ಲೈನ್‌ ಎಂಟರ್‌ಟೈನ್ಮೆಂಟ್ಸ್‌ ಈ ಚಿತ್ರವನ್ನು ನಿರ್ಮಾಣ ಮಾಡಿದೆ. ‘ಗುರು ಶಿಷ್ಯರು’ ಚಿತ್ರದ ನಂತರ ನಿರ್ದೇಶಕರಾದ ತರುಣ್‌ ಹಾಗೂ ಜಡೇಶ್ ಸೇರಿ ‘ಕಾಟೇರ’ ಕಥೆ ಹೆಣೆದಿದ್ದು, ದರ್ಶನ್ ಅವರಿಗಾಗಿಯೇ ಈ ಸಿನಿಮಾದ ಕಥೆ ಮಾಡಿದ್ದಾರೆ. ಮಾಲಾಶ್ರೀ ಪುತ್ರಿ ಆರಾಧನಾ ಈ ಚಿತ್ರದ ನಾಯಕಿ. ಇದು ತರುಣ್‌ ಅವರ ನಿರ್ದೇಶನದ ಮೂರನೇ ಚಿತ್ರವಾಗಿದ್ದು, 1970ರ ಕಾಲಘಟ್ಟದಲ್ಲಿ ನಡೆಯುವ ಕಥೆ ಹೊಂದಿದೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT