ADVERTISEMENT

ದೀಪಾವಳಿಗಾಗಿ ಕಾಜೋಲ್–ತನುಜಾ ಶಾಪಿಂಗ್

kajol-tanuja deepavali shopping

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2018, 19:30 IST
Last Updated 30 ಅಕ್ಟೋಬರ್ 2018, 19:30 IST
   

ಬೆಳಕು ಚೆಲ್ಲುವ ಹಬ್ಬ ದೀಪಾವಳಿಗಾಗಿ ಈಗಾಗಲೇ ಬಹುತೇಕರು ಶಾಪಿಂಗ್ ಮಾಡಲು ಆರಂಭಿಸಿರುತ್ತಾರೆ. ಇದಕ್ಕೆ ಬಾಲಿವುಡ್ ಸೆಲೆಬ್ರಿಟಿಗಳೂ ಹೊರತಲ್ಲ. ಇತ್ತೀಚೆಗೆ ನಟಿ ಕಾಜೋಲ್ ತನ್ನ ತಾಯಿ ತನುಜಾ ಅವರೊಂದಿಗೆ ದೀಪಾವಳಿ ಹಬ್ಬಕ್ಕಾಗಿ ಶಾಪಿಂಗ್ ಮಾಡಲು ತೆರಳಿದ್ದ ದೃಶ್ಯಗಳು ಇನ್‌ಸ್ಟಾಗ್ರಾಂನಲ್ಲಿ ವೈರಲ್ ಆಗಿ ಹರಿದಾಡುತ್ತಿವೆ.

ಈಚೆಗಷ್ಟೇ ತೆರೆಕಂಡ ಕಾಜೋಲ್ ಅಭಿನಯದ ‘ಹೆಲಿಕಾಪ್ಟರ್ ಐಲಾ’ ಸಿನಿಮಾ ಬಾಕ್ಸ್ ಆಫೀಸಿನಲ್ಲಿ ಯಶಸ್ಸು ಗಳಿಸಿದ್ದು, ಇದು ಕಾಜೋಲ್‌ ಅವರ ದೀಪಾವಳಿ ಸಂಭ್ರಮವನ್ನು ಮತ್ತಷ್ಟು ಹೆಚ್ಚು ಮಾಡಿದೆ.

ಈಚೆಗೆ ಮುಂಬೈನ ಜುಹುವಿನಲ್ಲಿ ಕಾಜೋಲ್ ಅಮ್ಮನೊಂದಿಗೆ ಶಾಪಿಂಗ್ ಮಾಡಿ ವಾಪಸ್ ಬರುತ್ತಿರುವ ದೃಶ್ಯಗಳಲ್ಲಿ ಅಂದವಾಗಿಯೇ ಕಾಣಿಸಿಕೊಂಡಿದ್ದಾರೆ. ಚರ್ಮದ ಬಣ್ಣದ ಪ್ಯಾಂಟಿಗೆ ಬಿಳಿಯ ಮೇಲುಡುಗೆ ಧರಿಸಿ, ಅದಕ್ಕೆ ತಕ್ಕಂತೆ ಕೂಲಿಂಗ್ ಕ್ಲಾಸ್ ಹಾಕಿರುವ ಕಾಜೋಲ್ ಈಗಲೂ ತಮ್ಮ ಮೈಮಾಟವನ್ನು ಚೆನ್ನಾಗಿ ಕಾಪಾಡಿಕೊಂಡಿರುವುದು ಅಭಿಮಾನಿಗಳಲ್ಲಿ ಹೆಮ್ಮೆ ಮೂಡಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.