ADVERTISEMENT

ಫಸ್ಟ್‌ಲುಕ್‌ನಲ್ಲಿ ಸೆಳೆದ ಕಂಗನಾ

ಮೆಂಟಲ್‌ ಹೈ ಕ್ಯಾ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2019, 11:58 IST
Last Updated 27 ಮಾರ್ಚ್ 2019, 11:58 IST
ಕಂಗನಾ
ಕಂಗನಾ   

‘ಮಣಿಕರ್ಣಿಕಾ’ದಲ್ಲಿ ಬೋಲ್ಡ್‌ ಅಗಿ ನಟಿಸುವ ಮೂಲಕ ಸಿನಿಪ್ರಿಯರಿಂದ ಭೇಷ್‌ ಎನಿಸಿಕೊಂಡಿದ್ದ ಕಂಗನಾ ಈಗ ಪ್ರಯೋಗಾತ್ಮಕ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಕಂಗನಾ ರನೌತ್‌ ಅಭಿನಯದ ‘ಮೆಂಟಲ್‌ ಹೈ ಕ್ಯಾ’ ಸಿನಿಮಾದ ಫಸ್ಟ್ ಲುಕ್‌ ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದು, ಸಾಕಷ್ಟು ಜನರಿಂದ ಮೆಚ್ಚುಗೆಯನ್ನೂ ಗಳಿಸಿದೆ.

‘ತನು ವೆಡ್ಸ್‌ ಮನು ರಿಟರ್ನ್ಸ್‌‘ ಸಿನಿಮಾದ ಒಂದು ದೃಶ್ಯದಲ್ಲಿ ಮಾನಸಿಕ ಅಸ್ವಸ್ಥರ ಕೇಂದ್ರದಲ್ಲಿ ನಡೆಯುವ ಸನ್ನಿವೇಶವೊಂದು ಸಾಕಷ್ಟು ಜನರಿಂದ ಲೈಕ್ ಪಡೆದುಕೊಂಡಿತ್ತು. ಈ ದೃಶ್ಯದಲ್ಲಿ ಕಂಗನಾ ಹಾಗೂ ಮಾಧವನ್‌ ಅಭಿನಯ ಹಾಗೂ ಸಂಭಾಷಣೆಯಿಂದ ನಗೆ ಬುಗ್ಗೆ ಉಕ್ಕಿತ್ತು. ಮಾನಸಿಕ ಅಸ್ವಸ್ಥೆಯ ಪಾತ್ರವೊಂದರಲ್ಲಿ ಕಂಗನಾ ಪ್ರೌಢ ನಟನೆ ಬಾಲಿವುಡ್‌ ಅನ್ನು ತುಂಬ ಸೆಳೆದಂತಿದೆ. ಈಗ ಎಲ್ಲೆಡೆ ಅವಳ ಚರ್ಚೆ ನಡೆಯುತ್ತಿರುವದೇ ಇದಕ್ಕೆ ಸಾಕ್ಷಿ.

ADVERTISEMENT

ಮಣಿಕರ್ಣಿಕಾ ಸಿನಿಮಾ ಶೂಟಿಂಗ್ ಆರಂಭವಾದಾಗಿನಿಂದ ಬಾಕ್ಸ್‌ ಆಫೀಸ್‌ನಲ್ಲಿ ಸದ್ದು ಮಾಡುವ ತನಕ, ಕಂಗನಾ ಸುದ್ದಿಯ ಉತ್ತುಂಗದಲ್ಲಿ ಇದ್ದರು. ಎಲ್ಲಿ ಹೋಗಿ, ಏನೇ ಮಾತನಾಡಿದರೂ ಕಂಗನಾ ಸುದ್ದಿಯಲ್ಲಿ ಇರುತ್ತಿದ್ದರು, ವಿವಾದ ಸೃಷ್ಟಿಯಾಗುತ್ತಿತ್ತು. ಇದೆಲ್ಲದರಿಂದ ಆಚೆ ಬಂದಿರುವ ಕಂಗನಾ ಅವರ ಕೈಯಲ್ಲಿ ಈಗ ನಾಲ್ಕೈದು ಸಿನಿಮಾಗಳು ಇವೆಯಂತೆ.

‘ದಿ ಟಚ್‌‘ ಸಿನಿಮಾದಲ್ಲಿ ಸ್ವತಃ ಕಂಗನಾ ಅವರೇ ನಿರ್ಮಾಣ ಹಾಗೂ ನಿರ್ದೇಶನದ ಹೊಣೆಹೊತ್ತಿದ್ದಾರೆ ಸದ್ಯದಲ್ಲೇ ಈ ಕುರಿತು ಅಧಿಕೃತ ಸುದ್ದಿ ಹೊರಬೀಳಲಿದೆಯಂತೆ. ಈ ನಡುವೆ ‘ಪಂಗಾ’ ಸಿನಿಮಾವನ್ನೂ ಒಪ್ಪಿಕೊಂಡಿದ್ದಾರೆ.

ಸದ್ಯಕ್ಕೆ ಕಂಗನಾ, ‘ಮೆಂಟಲ್‌ ಹೈ ಕ್ಯಾ’ ಸಿನಿಮಾದ ಕೊನೆಯ ಹಂತದ ಶೂಟಿಂಗ್‌ನಲ್ಲಿ ಬ್ಯುಸಿ ಆಗಿದ್ದಾರೆ. ಮೇ ತಿಂಗಳ ಅಂತ್ಯದಲ್ಲಿ ಸಿನಿಮಾ ಬಿಡುಗಡೆಯಾಗಲಿದೆ. ಏಕ್ತಾ ಕಪೂರ್ ನಿರ್ಮಾಣದ ಈ ಸಿನಿಮಾವನ್ನು ಪ್ರಕಾಶ್‌ ಕೋವೆಲಮುಡಿ ನಿರ್ದೇಶಿಸಿದ್ದಾರೆ. ಅಮೃತಾ ಪುರಿ, ಜಿಮ್ಮಿ ಶೆರ್ಗಿಲ್‌ ತಾರಾಗಣದಲ್ಲಿ ಇದ್ದಾರೆ. ಶಾರುಖ್‌ ಖಾನ್‌ ಕೂಡ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.