ADVERTISEMENT

ಬಾಲ್ಯದಲ್ಲಿ ನನ್ನ ಮೇಲೆ ಲೈಂಗಿಕ ಶೋಷಣೆ ನಡೆದಿತ್ತು ಎಂದ ಕಂಗನಾ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 25 ಏಪ್ರಿಲ್ 2022, 8:21 IST
Last Updated 25 ಏಪ್ರಿಲ್ 2022, 8:21 IST
ಕಂಗನಾ ರನೌಟ್
ಕಂಗನಾ ರನೌಟ್   

ಬೆಂಗಳೂರು: ‘ಬಾಲ್ಯದಲ್ಲಿ ನನ್ನ ಮೇಲೆ ಲೈಂಗಿಕ ಶೋಷಣೆ ನಡೆದಿತ್ತು’ ಎಂದು ನಟಿ ಕಂಗನಾ ರನೌಟ್ ಹೇಳಿದ್ದಾರೆ.

ಏಕ್ತಾ ಕಪೂರ್ ಅವರ ಹಾಗೂ ಎಂಎಕ್ಸ್ ಪ್ಲೇಯರ್‌ನಲ್ಲಿ ಪ್ರಸಾರ ಆಗುವ ‘ಲಾಕ್ ಅಪ್’ ರಿಯಾಲಿಟಿ ಶೋನಲ್ಲಿ ಕಂಗನಾ ಮಕ್ಕಳ ಮೇಲಿನ ಲೈಂಗಿಕ ಶೋಷಣೆ ಕುರಿತು ಮಾತನಾಡುವಾಗ ಈ ವಿಚಾರ ಹೇಳಿದ್ದಾರೆ.

‘ನಾನು ಹಿಮಾಚಲ ಪ್ರದೇಶದಲ್ಲಿ ಇರುವಾಗ ನನಗಾಗ 5 ವರ್ಷ ವಯಸ್ಸು. ಒಂದು ದಿನ ಪಕ್ಕದ ಮನೆಯನನಕ್ಕಿಂತ ಐದು ವರ್ಷ ದೊಡ್ಡವನಿದ್ದ ಬಾಲಕ ನನ್ನನ್ನು ಎತ್ತಿಕೊಳ್ಳುವ ನಾಟಕ ಮಾಡಿ ಲೈಂಗಿಕ ಶೋಷಣೆ ಮಾಡಿದ್ದ. ಇದು ಆಗ ನನಗೆ ಅರಿವಿಗೆ ಬಂದಿತ್ತು. ಆದರೆ, ಪ್ರತಿಭಟಿಸುವುದು ಹೇಗೆ? ಎಂಬ ಅರಿವು ಇರಲಿಲ್ಲ’ಎಂದಿದ್ದಾರೆ.

ADVERTISEMENT

‘ಗುಡ್ ಟಚ್, ಬ್ಯಾಡ್ ಟಚ್ ಎನ್ನುವುದು ಇಲ್ಲಿ ಮುಖ್ಯವಾಗುತ್ತೆ. ಬ್ಯಾಡ್ ಟಚ್ ಅನುಭವಕ್ಕೆ ಬಂದಾಗ ಮಕ್ಕಳು ಅದನ್ನು ಹೇಗೆ ಪ್ರತಿಭಟಿಸಬೇಕು ಎಂದು ನಾವು ಅವರಿಗೆ ಹೇಳಿ ಕೊಡಬೇಕು’ಎಂದು ಕಂಗನಾ ಹೇಳಿದ್ದಾರೆ.

ಇದೇ ಶೋನಲ್ಲಿ ಕಾಮಿಡಿಯನ್ ಮುನಾವರ್ ಫಾರೂಕಿ ಕೂಡ ತಮ್ಮ ಮೇಲೆ ಬಾಲ್ಯದಲ್ಲಿ ಲೈಂಗಿಕ ಶೋಷಣೆ ನಡೆದಿತ್ತು ಎಂದು ಹೇಳಿಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.