ಕುಂಟೆಬಿಲ್ಲೆ ಚಿತ್ರದಲ್ಲಿ ಯದು, ಮೇಘಶ್ರೀ
ಸಿನಿಮಾ ಹೇಗಾದರೂ ಇರಲಿ, ಆದರೆ ಟ್ರೇಲರ್, ಟೀಸರ್, ಹಾಡು ಬಿಡುಗಡೆ ಸಮಾರಂಭಗಳು ಮಾತ್ರ ವಿಶೇಷವಾಗಿರಬೇಕೆಂದು ಕೆಲ ಸಿನಿಮಾ ತಂಡಗಳು ಯೋಚಿಸುತ್ತವೆ. ‘ಕುಂಟೆಬಿಲ್ಲೆ’ ಚಿತ್ರದ ಟ್ರೇಲರ್ ಅದೇ ರೀತಿ ವಿಶೇಷವಾಗಿ ಬಿಡುಗಡೆಗೊಂಡು ಗಮನ ಸೆಳೆದಿದೆ. ಕ್ರಿಕೆಟ್ ಪಂದ್ಯಗಳ ವೇಳೆ ಶ್ವಾನದಂತೆ ಓಡಾಡುತ್ತಿದ್ದ ರೋಬೋಟ್ನಿಂದ ಚಿತ್ರದ ಟ್ರೇಲರ್ ಬಿಡುಗಡೆಗೊಳಿಸಲಾಯಿತು.
ಸಿದ್ದೇಗೌಡ ನಿರ್ದೇಶನದ ಎಂಟನೇ ಚಿತ್ರವಿದು. ನಾಯಕ ಯದುವಿಗೆ ನಾಯಕಿಯಾಗಿ ಮೇಘಶ್ರೀ ಜತೆಯಾಗಿದ್ದಾರೆ. ಎಸ್.ಬಿ.ಶಿವು,ಕುಮಾರ್ ಗೌಡ ಬಂಡವಾಳ ಹೂಡಿದ್ದಾರೆ. ಹರಿಕಾವ್ಯ ಸಂಗೀತ, ಮುಂಜಾನೆ ಮಂಜು ಛಾಯಾಚಿತ್ರಗ್ರಹಣ, ಸುಜಿತ್ ಸಂಕಲನ ಚಿತ್ರಕ್ಕಿದೆ.
‘ಹಳ್ಳಿಯ ಸೊಗಡಿನ ಕಥೆ. ಲವ್, ಸಸ್ಪೆನ್ಸ್ ಅಂಶಗಳಿರುವ ಚಿತ್ರ. ನಮ್ಮ ಕೈಯಾರೆ ನಾವೇ ನಮ್ಮ ಪ್ರೀತಿಯನ್ನು ಹೇಗೆ ಹಾಳು ಮಾಡಿಕೊಳ್ಳುತ್ತೇವೆ ಎಂಬುದರ ಸುತ್ತ ಕಥೆ ಸಾಗುತ್ತದೆ. ಚಿತ್ರವೀಗ ಸೆನ್ಸಾರ್ ಹಂತದಲ್ಲಿದೆ’ ಎಂದರು ನಿರ್ದೇಶಕರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.