ಕನ್ನಡ ಚಿತ್ರರಂಗದ ಮೇರುನಟಿ ಲೀಲಾವತಿ ಅವರು ಅಸ್ತಂಗತರಾಗಿದ್ದಾರೆ. 600 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಯಾಗಿ, ಪೋಷಕ ನಟಿಯಾಗಿ ವಿಭಿನ್ನ ಅಭಿನಯದಿಂದ ನೋಡುಗರ ಮನಸೆಳೆದಿದ್ದರು
ಚಿತ್ರ ಕೃಪೆ–ಪ್ರಜಾವಾಣಿ ಸಂಗ್ರಹ ಚಿತ್ರ
ದಕ್ಷಿಣ ಕನ್ನಡದ ಬೆಳ್ತಂಗಡಿ ಮೂಲದವರಾದ ಲೀಲಾವತಿ ಅವರು ನಾಟಕ ರಂಗದಿಂದ ಚಿತ್ರರಂಗಕ್ಕೆ ಬಂದವರು.
1949ರಲ್ಲಿ ‘ನಾಗಕನ್ನಿಕಾ’ ಚಿತ್ರದಲ್ಲಿ ಪುಟ್ಟ ಪಾತ್ರದಲ್ಲಿ ನಟಿಸುವ ಮೂಲಕ ಸಿನಿಪಯಣ ಆರಂಭಿಸಿದ್ದರು.
1971ರಲ್ಲಿ ಶ್ರೇಷ್ಠ ಅಭಿನಯಕ್ಕಾಗಿ ಕರ್ನಾಟಕ ರಾಜ್ಯ ಪ್ರಶಸ್ತಿಯನ್ನು ಎಂ. ರಾಜಶೇಖರ ಮೂರ್ತಿ ಅವರಿಂದ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಸ್ವೀಕರಿಸಿದ ಸಂದರ್ಭ.
ಚಿತ್ರರಂಗದವರೊಂದಿಗೆ ನಟಿ ಲೀಲಾವತಿ ವೇದಿಕೆಯಲ್ಲಿ ಕಾಣಿಸಿಕೊಂಡ ಸಂದರ್ಭ
ವೇದಿಕೆಯೊಂದರಲ್ಲಿ ಪುತ್ರ ವಿನೋದ್‌ರೊಂದಿಗೆ ಲೀಲಾವತಿಯವರು ಕಾಣಿಸಿಕೊಂಡ ಕ್ಷಣ
ಯಡಿಯೂರಪ್ಪ ಅವರಿಂದ ಲೀಲಾವತಿ ಅವರಿಗೆ ಸನ್ಮಾನ ನಡೆದ ಕ್ಷಣ
ರಾಮಕೃಷ್ಣ ಹೆಗಡೆಯವರಿಂದ ನಟಿ ಲೀಲಾವತಿಯವರು ಸನ್ಮಾನ ಸ್ವೀಕರಿಸಿದ ಸಂದರ್ಭ
ಮಗ ವಿನೋದ್ ಅವರ ಹಾಡಿನ ವೇಳೆ ವೇದಿಕೆಯಲ್ಲಿದ್ದ ಲೀಲಾವತಿಯವರು
ದಿವಂಗತ ಹಿರಿಯ ನಟಿ ಜಯಂತಿ ಅವರೊಂದಿಗೆ ಲೀಲಾವತಿಯವರು
ಕಲ್ಲಾಗು ಕಷ್ಟಗಳ ಮಳೆ ಸುರಿಯೆ ಎಂಬ ಭಾವಕ್ಕೆ ರೂಪಕವೀ ಚಿತ್ರ
ಬೆಂಗಳೂರಿನಲ್ಲಿ ನಡೆದ ಸಮಾರಂಭವೊಂದರಲ್ಲಿ ರಾಜ್‌ಕುಮಾರ್ ಅವರು ಲೀಲಾವತಿ ಅವರನ್ನು ಸನ್ಮಾನಿಸಿದ್ದರು. ಪಾರ್ವತಮ್ಮ ರಾಜ್‌ಕುಮಾರ್, ಪ್ರಮೀಳಾ ಜೋಷಾಯ್ ಅವರೂ ಆ ಸಂದರ್ಭಕ್ಕೆ ಸಾಕ್ಷಿಯಾಗಿದ್ದರು.
ಯೌವನದ ದಿನಗಳಲ್ಲಿ ನಟಿ ಲೀಲಾವತಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.