ADVERTISEMENT

ಒಂದೇ ದಿನ, ಒಂದೇ ಸಂಸ್ಥೆಯ ಎರಡು ಚಿತ್ರಗಳು

​ಪ್ರಜಾವಾಣಿ ವಾರ್ತೆ
Published 31 ಜುಲೈ 2025, 22:45 IST
Last Updated 31 ಜುಲೈ 2025, 22:45 IST
ಪ್ರಿಯಾ
ಪ್ರಿಯಾ   

ಒಂದೇ ನಿರ್ಮಾಣ ಸಂಸ್ಥೆಯಿಂದ ಎರಡು ಸಿನಿಮಾಗಳು ಒಂದೇ ದಿನ ತೆರೆಗೆ ಬರುವುದು ಬಹಳ ವಿರಳ. ನಾಗೇಶ್ ಕುಮಾರ್ ಯು.ಎಸ್ ಮತ್ತು ಜೆ.ಜೆ.ಶ್ರೀನಿವಾಸ್ ನಿರ್ಮಿಸಿ, ಜೆ.ಜೆ.ಶ್ರೀನಿವಾಸ್ ನಿರ್ದೇಶಿಸಿರುವ ‘ಕಸ್ಟಡಿ’, ‘ಪಾಲ್ಗುಣಿ’ ಚಿತ್ರಗಳು ಆ.8ರಂದು ತೆರೆಗೆ ಬರಲಿವೆ. ಉಭಯ ಚಿತ್ರಗಳ ಟ್ರೇಲರ್‌ ಇತ್ತೀಚೆಗಷ್ಟೇ ಬಿಡುಗಡೆಗೊಂಡಿವೆ. 

‘ಕಸ್ಟಡಿ’ ಸಸ್ಪೆನ್ಸ್, ಥ್ರಿಲ್ಲರ್ ಕಥಾಹಂದರ ಹೊಂದಿರುವ ಚಿತ್ರವಾದರೆ, ‘ಪಾಲ್ಗುಣಿ’ ಮಂಡ್ಯದಲ್ಲಿ ನಡೆದ ನೈಜ ಘಟನೆಯೊಂದನ್ನು ಆಧರಿಸಿದ ಕಥಾಹಂದರ ಹೊಂದಿರುವ ಚಿತ್ರ. ‘ಭೀಮ’ ಖ್ಯಾತಿಯ ಪ್ರಿಯಾ ಶಠಮರ್ಷಣ ‘ಕಸ್ಟಡಿ’ ಚಿತ್ರದ ಪ್ರಮುಖಪಾತ್ರದಲ್ಲಿ, ರೇಖಾಶ್ರೀ ‘ಪಾಲ್ಗುಣಿ’ ಪಾತ್ರದಲ್ಲಿ ನಟಿಸಿದ್ದಾರೆ.

‘ನನ್ನ ನಿರ್ದೇಶನದ ಎರಡು ಚಿತ್ರಗಳನ್ನು ನಾಗೇಶ್ ಕುಮಾರ್ ಯು.ಎಸ್ ಅವರೇ ನಿರ್ಮಾಣ ಮಾಡಿದ್ದಾರೆ. ನನಗೆ ತಿಳಿದ ಹಾಗೆ ಒಬ್ಬರೆ ನಿರ್ಮಿಸಿರುವ ಹಾಗೂ ಒಬ್ಬರೆ ನಿರ್ದೇಶಿಸಿರುವ ಎರಡು ಚಿತ್ರಗಳು ಒಂದೇ ದಿನ ಬಿಡುಗಡೆಯಾಗುತ್ತಿರುವುದು ಇದೇ ಮೊದಲು. ಈ ಎರಡು ಚಿತ್ರಗಳು ವರಮಹಾಲಕ್ಷ್ಮೀ ಹಬ್ಬದ ದಿನ ಬಿಡುಗಡೆಯಾಗುತ್ತಿದೆ. ಎರಡೂ ಭಿನ್ನ ಕಥೆಗಳನ್ನು ಹೊಂದಿರುವ ಚಿತ್ರಗಳು. ಎರಡಕ್ಕೂ ಬೇರೆ ಬೇರೆ ವರ್ಗದ ಪ್ರೇಕ್ಷಕರು ಇರುವುದರಿಂದ ಒಂದೇ ದಿನ ಚಿತ್ರ ಬಿಡುಗಡೆ ಧೈರ್ಯ ಮಾಡಿದ್ದೇವೆ’ ಎಂದರು ನಿರ್ದೇಶಕರು. 

ADVERTISEMENT

‘ನಾನು ಈ ಚಿತ್ರದಲ್ಲಿ ಪೊಲೀಸ್ ಅಧಿಕಾರಿ. ದುರ್ಗಾ ಪರಮೇಶ್ವರಿ ನನ್ನ ಪಾತ್ರದ ಹೆಸರು. ಶೀರ್ಷಿಕೆಯೇ ಹೇಳುವಂತೆ ಪೊಲೀಸ್‌ ಠಾಣೆಯಲ್ಲಿ ನಡೆಯುವ ಕಥೆಯಿದು’ ಎಂದು ಪ್ರಿಯಾ. 

ನಾಗೇಶ್‌ ಕುಮಾರ್‌ ಯು.ಎಸ್‌ ಜೆ.ಜೆ.ಶ್ರೀನಿವಾಸ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.