ADVERTISEMENT

ಹೊರಬಂತು ‘ಬ್ಯಾಕ್ ಬೆಂಚರ್ಸ್’ ಟೀಸರ್‌

​ಪ್ರಜಾವಾಣಿ ವಾರ್ತೆ
Published 15 ಮೇ 2024, 14:31 IST
Last Updated 15 ಮೇ 2024, 14:31 IST
ಚಿತ್ರತಂಡ
ಚಿತ್ರತಂಡ   

ಕಾಲೇಜು ದಿನಗಳ ಕುರಿತಾದ ಕಥೆ ಹೊಂದಿರುವ ‘ಬ್ಯಾಕ್ ಬೆಂಚರ್ಸ್’ ಚಿತ್ರದ ಟೀಸರ್‌ ಇತ್ತೀಚೆಗಷ್ಟೆ ಬಿಡುಗಡೆಗೊಂಡಿದೆ. ನಿರ್ಮಾಪಕ, ನಿರ್ದೇಶಕರಾಗಿ ಗುರುತಿಸಿಕೊಂಡಿರುವ ಬಿ.ಆರ್. ರಾಜಶೇಖರ್ ಈ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ.

‘ಕುತೂಹಲಕಾರಿಯಾದ ಕಂಟೆಂಟಿನೊಂದಿಗೆ, ಕಾಮಿಡಿಯನ್ನು ನಾಜೂಕಾಗಿ ಬೆರೆಸಿ ಈ ಸಿನಿಮಾ ಸಿದ್ಧಗೊಂಡಿದೆ. ಈಗಾಗಲೇ ಹಾಡುಗಳು ಪ್ರೇಕ್ಷಕರ ಗಮನ ಸೆಳೆದಿವೆ. ಇದೀಗ ಟೀಸರ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ‘ಕಿರಿಕ್ ಪಾರ್ಟಿ’ಯೊಂದಿಗೆ ಆವತ್ತು ಹೊಸ ತಂಡ ಕಟ್ಕೊಂಡ್ ಬಂದಿದ್ದರು. ಆಮೇಲೆ ‘ಹಾಸ್ಟೆಲ್ ಹುಡುಗ್ರು’ ಬಂದ್ರು, ಈಗ ನಾವು ಹೊಸ ತಂಡ ಕಟ್ಕೊಂಡು ಬರ್ತಾ ಇದೀವಿ’ ಎಂದರು ನಿರ್ದೇಶಕರು.

ಪಿಪಿ ಪ್ರೊಡಕ್ಷನ್ಸ್ ಅಡಿಯಲ್ಲಿ ರಾಜಶೇಖರ್ ಅವರೇ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ರಂಜನ್, ಜತಿನ್ ಆರ್ಯನ್, ಆಕಾಶ್ ಎಂ.ಪಿ, ಶಶಾಂಕ್ ಸಿಂಹ, ಸುಚೇಂದ್ರ ಪ್ರಸಾದ್, ಅರವಿಂದ್ ಕುಪ್ಳೀಕರ್ ಮುಂತಾದವರ ತಾರಾಗಣದಲ್ಲಿದ್ದಾರೆ. ನಕುಲ್ ಅಭಯಂಕರ್ ಸಂಗೀತ ನಿರ್ದೇಶನ, ಮನೋಹರ್ ಜೋಶಿ ಛಾಯಾಚಿತ್ರಗ್ರಹಣ, ರಂಜನ್ ಮತ್ತು ಅಮರ್ ಗೌಡ ಸಂಕಲನ ಈ ಚಿತ್ರಕ್ಕಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.