ಭೈರವ ಗೀತ
ರಾಶಿ ಕಂಬೈನ್ಸ್ ಲಾಂಛನದಲ್ಲಿ ಭಾಸ್ಕರ್ ರಾಶಿ ಅವರು ನಿರ್ಮಿಸಿರುವ ಚಿತ್ರವಿದು.ಸಿದ್ದಾರ್ಥ ತಟೋಲು ನಿರ್ದೇಶನದ ಈ ಚಿತ್ರಕ್ಕೆ ಕಥೆ, ಚಿತ್ರಕಥೆಯನ್ನು ರಾಮ್‍ಗೋಪಾಲ್ ವರ್ಮ ಹಾಗೂ ರಾಮ್ ವಂಶಿಕೃಷ್ಣ ಬರೆದಿದ್ದಾರೆ. ಜಗದೀಶ್ ಛಾಯಾಗ್ರಹಣವಿದೆ. ರವಿಶಂಕರ್ ಸಂಗೀತ ನೀಡಿದ್ದಾರೆ. ಕೆ. ಕಲ್ಯಾಣ್ ಹಾಡುಗಳನ್ನು ರಚಿಸಿದ್ದಾರೆ. ರಾಮ್ ವಂಶಿಕೃಷ್ಣ ಹಾಗೂ ಮಾಸ್ತಿ ಸಂಭಾಷಣೆ ಬರೆದಿದ್ದಾರೆ. ಈ ಚಿತ್ರದ ನಾಯಕರಾಗಿ ಧನಂಜಯ್ ಅಭಿನಯಿಸಿದ್ದಾರೆ. ಇರಾ ಮೋರ್ ನಾಯಕಿ. ಬಾಲ್‍ರಾಜ್ ವಾಡಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
ಆರೆಂಜ್
ನವೀನ್ ಅವರು ನಿರ್ಮಿಸಿರುವ ಸಿನಿಮಾ ಇದು. ಗಣೇಶ್ ನಾಯಕರಾಗಿ ನಟಿಸಿರುವ ಈ ಚಿತ್ರಕ್ಕೆ ಪ್ರಿಯಾ ಆನಂದ್ ನಾಯಕಿ. ಪ್ರಶಾಂತ್ ರಾಜ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ಸಂತೋಷ್ ರೈ ಪಾತಾಜೆ ಅವರ ಛಾಯಾಗ್ರಹಣವಿದೆ. ನಟರಾಜ್ ಸಂಭಾಷಣೆ ಬರೆದಿದ್ದಾರೆ. ಸಾಧುಕೋಕಿಲ, ರಂಗಾಯಣ ರಘು, ಅವಿನಾಶ್ ತಾರಾಗಣದಲ್ಲಿದ್ದಾರೆ.
ಚರಂತಿ
ರಾವಲ್ ಸಿನಿ ಫೋಕಸ್ ಲಾಂಛನದಲ್ಲಿ ಪರಶುರಾಮ್ ರಾವಲ್ ನಿರ್ಮಾಣದ ಚಿತ್ರವಿದು. ಚಿತ್ರದ ಕಥೆ ಬರೆದು ನಿರ್ದೇಶನ ಮಾಡಿದವರು ಮಹೇಶ್ ರಾವಲ್. ಅವಿನಾಶ್ ಬಿ. ಸಂಗೀತ, ಶಿವಾಜಿ ಛಾಯಾಗ್ರಹಣ ಈ ಚಿತ್ರಕ್ಕಿದೆ. ಮಹೇಶ್ ರಾವಲ್, ಸಚಿನ್ ಪುರೋಹಿತ್, ಪ್ರೇಮಾಚಾರಿ, ಆರ್. ಮಾಸ್, ರೇಖಾದಾಸ್, ಎಂ.ಎನ್. ಸುರೇಶ್, ವಿಜಯ್, ಸದಾನಂದ ಕಾಳೆ, ರಾಜಪ್ಪ ದಳವಾಯಿ ತಾರಾಗಣದಲ್ಲಿದ್ದಾರೆ.
ಮಟಾಶ್
ಗೋಲ್ಡ್ ಆ್ಯಂಡ್ ಡ್ರೀಮ್ಸ್ – ಕ್ರೋಮ್ಸ್- ಬಾಲಮಣಿ ಪ್ರೊಡಕ್ಷನ್ ಲಾಂಛನದಲ್ಲಿ ಸತೀಶ್ ಪಾಠಕ, ಗಿರೀಶ್ ಪಟೇಲ್, ಚಂದ್ರಶೇಖರ್ ಮಣೂರ ಹಾಗೂ ಎಸ್.ಡಿ. ಅರವಿಂದ ನಿರ್ಮಿಸಿರುವ ಚಿತ್ರವಿದು.
ಎಸ್.ಡಿ. ಅರವಿಂದ್ ನಿರ್ದೇಶನದ ಈ ಚಿತ್ರಕ್ಕೆ ರಾನಿ ಅಬ್ರಾಹಿಂ ಛಾಯಾಗ್ರಹಣವಿದೆ. ಎಸ್.ಡಿ. ಅರವಿಂದ್ ಸಂಗೀತ ನಿರ್ದೇಶನದ ಈ ಚಿತ್ರಕ್ಕೆ ವಿಜಯ್ ಕೃಷ್ಣ ಸಂಗೀತ ನೀಡಿದ್ದಾರೆ. ತಾರಾಬಳಗದಲ್ಲಿ ಸಮರ್ಥ ನರಸಿಂಹರಾಜು, ಐಶ್ವರ್ಯಾ ಸಿಂಧೋಗಿ, ರಜನಿ ಭಾರದ್ವಾಜ್, ರಘು ರಮಣಕೊಪ್ಪ, ವಿ.ಮನೋಹರ್, ನಂದಗೋಪಾಲ ಇದ್ದಾರೆ
ಮುಂದಿನ ಬದಲಾವಣೆ
ಸಿರಪ್ ಕ್ರಿಯೇಷನ್ಸ್ ಲಾಂಛನದಡಿಯಲ್ಲಿ ಫಣಿಭೂಷಣ್ ನಿರ್ಮಿಸುತ್ತಿರುವ ಹಾಸ್ಯ ಪ್ರಧಾನ ಚಿತ್ರವಿದು. ಚಿತ್ರಕ್ಕೆ ಕೋಟೇಶ್ವರ್ ಛಾಯಾಗ್ರಹಣ, ಕಾರ್ತಿಕ್ ವೆಂಕಟೇಶ್ ಸಂಗೀತವಿದೆ. ಚಿತ್ರದ ಕಥೆ, ಚಿತ್ರಕಥೆ, ಸಾಹಿತ್ಯ, ಸಂಭಾಷಣೆ ಮತ್ತು ನಿರ್ದೇಶನದ ಹೊಣೆಯನ್ನು ಪ್ರವೀಣ್‍ಭೂಷಣ್ ಹೊತ್ತಿದ್ದಾರೆ. ತಾರಾಗಣದಲ್ಲಿ ಪ್ರವೀಣ್‍ಭೂಷಣ್, ಸಂಗೀತಾ, ಸತೀಶ್, ಪಂಚಗೌರಿ, ಆರ್ಯನ್, ಮಾಲಾಶ್ರೀ, ಚಕ್ರವರ್ತಿ, ಲಕ್ಷ್ಮಣ್‍ಗೌಡ ಇದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.