ಸದ್ಯ ತೆರೆಯಲ್ಲಿರುವ ಸೂಪರ್ ಹಿಟ್ ಚಿತ್ರಗಳಿಂದಾಗಿ ಬೇರೆ ಸಿನಿಮಾಗಳ ಪ್ರದರ್ಶನಕ್ಕೆ ಚಿತ್ರಮಂದಿರಗಳು ಸಿಗುವುದು ಕಷ್ಟ ಎಂಬ ಪರಿಸ್ಥಿತಿ ನಿರ್ಮಾಣಗೊಂಡಿದೆ. ಜೊತೆಗೆ ವಿಜಯ್ ದೇವರಕೊಂಡ ನಟನೆಯ ‘ಕಿಂಗ್ಡಂ’ ಚಿತ್ರದ ಮುಂಗಡ ಬುಕ್ಕಿಂಗ್ ಜೋರಾಗಿದೆ. ಅದರ ನಡುವೆಯೂ ಈ ವಾರ ಕೊತ್ತಲವಾಡಿ ಸೇರಿದಂತೆ ಮೂರು ಸಿನಿಮಾಗಳು ತೆರೆ ಕಾಣುತ್ತಿವೆ...
ಎಲ್ಟು ಮುತ್ತಾ
ರಾ.ಸೂರ್ಯ ನಿರ್ದೇಶಿಸಿ, ನಟಿಸಿರುವ ಚಿತ್ರವಿದು. ಹೈ ಫೈವ್ ಸ್ಟುಡಿಯೋಸ್ ಲಾಂಛನದಲ್ಲಿ ಸತ್ಯ ಎಸ್.ಶ್ರೀನಿವಾಸನ್ ನಿರ್ಮಿಸಿದ್ದಾರೆ.
‘ಎಲ್ಟು ಮುತ್ತಾ’ ಎರಡು ಪಾತ್ರಗಳ ಹೆಸರು. ಸಾವಿನಲ್ಲಿ ಡೋಲು ಬಡಿಯುವವರ ಸುತ್ತ ಹೆಣೆದಿರುವ ಕಥೆ. ಕೊಡಗು ಪ್ರಾಂತ್ಯದಲ್ಲಿ ನಡೆಯುವ ಕಥೆಯೂ ಹೌದು. ಚಿಕ್ಕವಯಸ್ಸಿನಿಂದ ನಾನು ಕಂಡ ಕೆಲವು ಸನ್ನಿವೇಶಗಳನ್ನು ಚಿತ್ರದ ಮೂಲಕ ತರುತ್ತಿದ್ದೇನೆ. ಎಲ್ಲರಿಗೂ ಚಿತ್ರ ಇಷ್ಟವಾಗಲಿದೆ ಎಂಬ ಭರವಸೆ ಇದೆ. ನಾನು ನಿರ್ದೇಶನದ ಜೊತೆಗೆ ಎಲ್ಟು ಪಾತ್ರದಲ್ಲೂ ಅಭಿನಯಿಸಿದ್ದೇನೆ. ಮುತ್ತಾ ಪಾತ್ರದಲ್ಲಿ ಶೌರ್ಯ ಪ್ರತಾಪ್ ನಟಿಸಿದ್ದಾರೆ ಎನ್ನುತ್ತಾರೆ ನಿರ್ದೇಶಕರು.
ಪ್ರಿಯಾಂಕ ಮಳಲಿ ನಾಯಕಿ. ಕಾಕ್ರೋಜ್ ಸುಧೀ, ನವೀನ್ ಡಿ ಪಡೀಲ್, ಯಮುನಾ ಶ್ರೀನಿಧಿ ಮುಂತಾದವರು ನಟಿಸಿದ್ದಾರೆ. ಪ್ರಸನ್ನ ಕೇಶವ ಸಂಗೀತ ನಿರ್ದೇಶನವಿದೆ.
ವೃತ್ತ
ಮಿಸ್ಟರಿ, ಥ್ರಿಲ್ಲರ್ ಕಥೆ ಹೊಂದಿರುವ ಚಿತ್ರಕ್ಕೆ ಲಿಖಿತ್ ಕುಮಾರ್ ಆ್ಯಕ್ಷನ್ ಕಟ್ ಹೇಳಿದ್ದಾರೆ.
‘ಸಿದ್ದಾರ್ಥ್ ಎಂಬ ಪಾತ್ರದ ಸುತ್ತ ನಡೆಯುವ ಕಥೆ ಇದರಲ್ಲಿದ್ದು, ಸಿದ್ದಾರ್ಥ್‌ಗೆ ಆತನ ಮಸ್ಥಿತಿಯೇ ಶತ್ರು. ಒಂದು ರಾತ್ರಿ, ಒಂದು ಕರೆಯಿಂದ ನಾಯಕ ದಾರಿಯಲ್ಲಿ ತೆಗೆದುಕೊಳ್ಳಬಹುದಾದ ತಪ್ಪು ನಿರ್ಧಾರದಿಂದ ಏನೆಲ್ಲಾ ಸಂಭವಿಸಲಿದೆ ಎಂಬುವುದು ಚಿತ್ರದ ಕಥೆ. ಯುವನಟ ಮೊಹಿಯುದ್ದೀನ್ ಅವರು ನಾಯಕ ಸಿದ್ದಾರ್ಥ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಜಯಣ್ಣ ಫಿಲ್ಮಸ್ ಚಿತ್ರದ ವಿತರಣೆ ಜವಾಬ್ದಾರಿ ಹೊತ್ತುಕೊಂಡಿದೆ’ ಎಂದಿದ್ದಾರೆ ಲಿಖಿತ್.
ಟಿ.ಶಿವಕುಮಾರ್ ಅವರು ಈ ಚಿತ್ರವನ್ನು ನಿರ್ಮಿಸಿದ್ದಾರೆ, ಯೋಗೇಶ್‌ಗೌಡ ಕಥೆ, ಶಂಕರ ರಾಮನ್ ಅವರ ಸಂಭಾಷಣೆ ಚಿತ್ರಕ್ಕಿದೆ. ಮಹಿರ್ ಜತೆ ಹರಿಣಿ ಸುಂದರ ರಾಜನ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಆಂಟನಿ ಎಂ.ಜಿ, ಹರಿ ಕೃಷಾಂತ್ ಸಂಗೀತ ಸಂಯೋಜನೆ, ಗೌತಮ್ ಕೃಷ್ಣ ಛಾಯಾಚಿತ್ರಗ್ರಹಣ, ಸುರೇಶ್ ಆರ್ಮುಗಂ ಸಂಕಲನ ಈ ಚಿತ್ರಕ್ಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.