ADVERTISEMENT

‘ಕಾಂತಾರ’ ಕರ್ನಾಟಕದಲ್ಲಿ ಒಂದು ಕೋಟಿ ಟಿಕೆಟ್‌ ಮಾರಾಟ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2022, 9:54 IST
Last Updated 10 ನವೆಂಬರ್ 2022, 9:54 IST
‘ಕಾಂತಾರ’ದ ಒಂದು ಕೋಟಿ ಟಿಕೆಟ್‌ ಮಾರಾಟದ ಬಗ್ಗೆ ಹೊಂಬಾಳೆ ಫಿಲ್ಮ್ಸ್‌ ಬಿಡುಗಡೆ ಮಾಡಿರುವ ಪೋಸ್ಟರ್‌
‘ಕಾಂತಾರ’ದ ಒಂದು ಕೋಟಿ ಟಿಕೆಟ್‌ ಮಾರಾಟದ ಬಗ್ಗೆ ಹೊಂಬಾಳೆ ಫಿಲ್ಮ್ಸ್‌ ಬಿಡುಗಡೆ ಮಾಡಿರುವ ಪೋಸ್ಟರ್‌   

‘ಕಾಂತಾರ’ ಚಿತ್ರ ಸೆ. 30ರಂದು ಬಿಡುಗಡೆಯಾಗಿ ಸದ್ದು ಮಾಡಿದ್ದು ಗೊತ್ತೇ ಇದೆ. ಇದೀಗ ಕರ್ನಾಟಕದಲ್ಲಿ ಒಂದು ಕೋಟಿ ಟಿಕೆಟ್‌ ಮಾರಾಟವಾದ ದಾಖಲೆ ಸೃಷ್ಟಿಸಿದೆ.

ಕನ್ನಡ, ಹಿಂದಿ, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಿತ್ತು. ಭಾರತದಲ್ಲಿ ಈವರೆಗೆ ಚಿತ್ರ 257 ಕೋಟಿ ರೂಪಾಯಿಯಷ್ಟು ಗಳಿಕೆ ಮಾಡಿದೆ. ಇದೀಗ ಕರ್ನಾಟಕವೊಂದರಲ್ಲೇ 1 ಕೋಟಿ ಟಿಕೆಟ್‌ ಮಾರಾಟವಾಗಿದ್ದು ಇನ್ನೊಂದು ದಾಖಲೆ. ಹಾಗೆಂದು ಚಿತ್ರದ ಒಟ್ಟಾರೆ ಗಳಿಕೆಯ ನಿಖರ ಲೆಕ್ಕವನ್ನು ಹೊಂಬಾಳೆ ಫಿಲ್ಮ್ಸ್ ಬಿಟ್ಟುಕೊಟ್ಟಿಲ್ಲ.

‘ಕಾಂತಾರ’ ಚಿತ್ರವನ್ನು ರಿಷಭ್‌ ಶೆಟ್ಟಿ ನಿರ್ದೇಶಿಸಿ ನಟಿಸಿದ್ದಾರೆ. ಸಪ್ತಮಿ ಗೌಡ ಈ ಚಿತ್ರದ ನಾಯಕಿ. ಚಿತ್ರಮಂದಿರಗಳಲ್ಲಿ ದಾಖಲೆ ಪ್ರದರ್ಶನ ಕಾಣುತ್ತಿರುವ ಹಿನ್ನೆಲೆಯಲ್ಲಿ ಚಿತ್ರದ ಒಟಿಟಿ ಬಿಡುಗಡೆಯನ್ನು ಮುಂದಕ್ಕೆ ಹಾಕಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.