ADVERTISEMENT

ಮಳೆಯೊಂದಿಗೆ ಬರ್ತಾನೆ ‘ಕಾಪ್ಪಾನ್‌‘

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2019, 14:08 IST
Last Updated 17 ಏಪ್ರಿಲ್ 2019, 14:08 IST
‘ಕಾಪ್ಪಾನ್‌’ನ ನೋಟ
‘ಕಾಪ್ಪಾನ್‌’ನ ನೋಟ   

ಮಾಲಿವುಡ್‌ ಮತ್ತು ಕಾಲಿವುಡ್‌ನಲ್ಲಿ ಕುತೂಹಲ ಹುಟ್ಟಿಸಿರುವ ಚಿತ್ರ ‘ಕಾಪ್ಪಾನ್‌’ ಮಳೆಗಾಲದಲ್ಲಿ ಚಿತ್ರಮಂದಿರಗಳಿಗೆ ಲಗ್ಗೆಯಿಡಲಿದೆ. ಸೌರಮಾನ ಯುಗಾದಿಯಂದು ಹಬ್ಬದ ಭೋಜನದಂತಹ ಟೀಸರ್‌ ಬಿಡುಗಡೆ ಮಾಡಿದ ಥ್ರಿಲ್‌ ನೀಡಿದೆ ಚಿತ್ರ ತಂಡ.

ಪೊಲಿಟಿಕಲ್‌ ಸಸ್ಪೆನ್ಸ್‌ ಥ್ರಿಲ್ಲರ್‌ ಆಗಿದ್ದ ‘ಲೂಸಿಫರ್‌’ನಲ್ಲಿ ತಣ್ಣಗಿನ ಕ್ರೌರ್ಯದೊಂದಿಗೆ ಅಬ್ಬರಿಸಿರುವ ಮೋಹನ್‌ಲಾಲ್‌ ಮತ್ತೊಮ್ಮೆ ಅಂತಹುದೇ ಚಿತ್ರಕತೆಯುಳ್ಳ ‘ಕಾಪ್ಪಾನ್‌’ನಲ್ಲಿ ಖಳ ಪಾತ್ರದಲ್ಲಿ ಚಿತ್ರವನ್ನು ಆವರಿಸಿಕೊಂಡಿದ್ದಾರೆ. ತಮಿಳಿನ ಅಗ್ರನಟ ಸೂರ್ಯನ ಸ್ಟೈಲಿಶ್‌ ಲುಕ್‌ಗೆ ವೀಕ್ಷಕರು ಫುಲ್‌ ಖುಷ್‌ ಆಗಿದ್ದಾರೆ.

ಟೀಸರ್‌ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ಅಭಿಮಾನಿಗಳು ವೀಕ್ಷಿಸಿದ್ದಾರೆ. ಅಲ್ಲದೆ ಇಂಟರ್‌ನೆಟ್‌ನಲ್ಲಿ ‘ಕಾಪ್ಪಾನ್‌’ ಹವಾ ಸೃಷ್ಟಿಯಾಗಿದೆ. ಇದರಿಂದ ಸೂರ್ಯ ಮತ್ತು ಮೋಹನ್‌ಲಾಲ್ ತಮ್ಮ ಚಿತ್ರದ ಗೆಲುವಿನ ಸೂಚನೆ ಇದಾಗಿದೆ ಎಂಬ ಕಾಮೆಂಟ್‌ ನೀಡಿದ್ದಾರೆ. ಆಗಸ್ಟ್‌ 30ರಂದು ‘ಕಾಪ್ಪಾನ್‌‘ ಬಿಡುಗಡೆಯಾಗಲಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.