ADVERTISEMENT

ಕರಣ್‌ ಜೋಹರ್‌ 50ನೇ ಜನ್ಮದಿನದ ಪಾರ್ಟಿ: 55 ಜನರಿಗೆ ಕೋವಿಡ್‌?

​ಪ್ರಜಾವಾಣಿ ವಾರ್ತೆ
Published 5 ಜೂನ್ 2022, 11:14 IST
Last Updated 5 ಜೂನ್ 2022, 11:14 IST
ಅಭಿಷೇಕ್, ಐಶ್ವರ್ಯ, ಕರಣ್‌ ಜೋಹರ್‌
ಅಭಿಷೇಕ್, ಐಶ್ವರ್ಯ, ಕರಣ್‌ ಜೋಹರ್‌   

ಬಾಲಿವುಡ್‌ ಸ್ಟಾರ್‌ ನಿರ್ದೇಶಕಕರಣ್ ಜೋಹರ್ ಇತ್ತೀಚೆಗೆ ಅದ್ಧೂರಿಯಾಗಿ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡರು.ಜನ್ಮದಿನದ ಪಾರ್ಟಿಗೆ ಬಾಲಿವುಡ್‌, ಟಾಲಿವುಡ್‌, ಸ್ಯಾಂಡಲ್‌ವುಡ್‌ ಹಾಗೂ ಕಾಲಿವುಡ್ ತಾರೆಗಳ ದಂಡೇ ನೆರದಿತ್ತು.

ಸಿನಿಮಾರಂಗದಬಹುತೇಕ ಸ್ಟಾರ್ ನಟ ನಟಿಯರು, ನಿರ್ದೇಶಕರು, ನಿರ್ಮಾಪಕರು, ಕಲಾವಿದರು ಒಟ್ಟಾಗಿ ಒಂದೇ ಸೂರಿನಡಿ ಮಿಂಚಿದ್ದರು. ಇದೇ ವೇಳೆಹಲವರಿಗೆ ಕೋವಿಡ್‌ ಹರಡಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಕರಣ್‌ ಜೋಹರ್‌ ಅವರು 50ನೇ ವರ್ಷದ ಜನ್ಮದಿನದ ಪಾರ್ಟಿಯಲ್ಲಿ ನೂರಾರು ಜನರು ಭಾಗವಹಿಸಿದ್ದರು. ಇದರಲ್ಲಿ ಪಾಲ್ಗೊಂಡಿದ್ದವರ ಪೈಕಿ 55 ಜನರಿಗೆ ಕೋವಿಡ್‌ ಕಾಣಿಸಿಕೊಂಡಿದೆ ಎಂದು ವರದಿಯಾಗಿದೆ. ಈ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲೂ ಪೋಸ್ಟ್‌ಗಳು ಹರಿದಾಡುತ್ತಿವೆ.

ADVERTISEMENT

ಆದರೆ ಈ ಪಾರ್ಟಿಯಲ್ಲಿ ಭಾಗವಹಿಸಿದ್ದವರಲ್ಲಿ ಯಾರು ಯಾರಿಗೆ ಕೋವಿಡ್‌ ಬಂದಿದೆ ಎಂಬ ಮಾಹಿತಿ ಲಭ್ಯವಾಗಿಲ್ಲ. ಈ ಬಗ್ಗೆ ಕರಣ್‌ ಜೋಹರ್‌ ಕೂಡ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಕರೀನಾ ಕಪೂರ್, ಸೈಫ್ ಅಲಿ ಖಾನ್, ಶಾರುಖ್ ಖಾನ್ ದಂಪತಿ, ಹೃತಿಕ್ ರೋಷನ್, ರವೀನಾ ಟಂಡನ್, ಮಲೈಕಾ ಅರೋರಾ, ಜಾಹ್ನವಿ ಕಪೂರ್, ಅನನ್ಯ ಪಾಂಡೆ, ಕಾಜೊಲ್ ಸೇರಿದಂತೆ ಹಲವರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.