
ನಟರಾಜ್ ಹಾಗೂ ನಿರೀಕ್ಷಾ ಶೆಟ್ಟಿ ಜೋಡಿಯಾಗಿ ನಟಿಸಿರುವ ‘ಕರಿಕಾಡ’ ಚಿತ್ರದ ‘ರತುನಿ, ರತುನಿ’ ಹಾಡು ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ. ಗಿಲ್ಲಿ ವೆಂಕಟೇಶ್ ಆ್ಯಕ್ಷನ್ ಕಟ್ ಹೇಳಿರುವ ಚಿತ್ರ ಫೆಬ್ರುವರಿ 6ರಂದು ತೆರೆಗೆ ಬರಲಿದೆ.
ಗೀತೆಗೆ ಶಶಾಂಕ್ ಶೇಷಗಿರಿ ಸಂಗೀತವಿದ್ದು, ನಾಗೇಂದ್ರ ಪ್ರಸಾದ್ ಸಾಹಿತ್ಯ ರಚಿಸಿದ್ದಾರೆ. ಶಂಶಾಕ್ ಶೇಷಗಿರಿ ಹಾಗೂ ಐಶ್ವರ್ಯಾ ರಂಗರಾಜನ್ ಹಾಡಿಗೆ ಧ್ವನಿಯಾಗಿದ್ದಾರೆ.
‘ಸಿನಿಮಾ ಮುಗಿದು ಬಿಡುಗಡೆ ಹಂತ ತಲುಪಿದ್ದೇವೆ. ‘ಕಬ್ಬಿನ ಜೊಲ್ಲೆ’ ಹಾಡಿಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. ಅದೇ ರೀತಿ ಈ ಹಾಡು ಕೂಡ ಜನರಿಗೆ ಇಷ್ಟವಾಗಬಹುದು ಎಂಬ ಭರವಸೆಯಿದೆ. ಹಾಡು, ಟೈಟಲ್‌ನಿಂದ ಏನೂ ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ಸಿನಿಮಾ ಬೇರೆಯೇ ಇದೆ. ಜನ ನಮ್ಮನ್ನು ಫಸ್ಟ್‌ಕ್ಲಾಸ್‌ನಲ್ಲಿ ಪಾಸ್ ಮಾಡಬೇಕಿದೆ. ಚಿತ್ರ ಬಿಡುಗಡೆ ಭಯ ಶುರುವಾಗಿದೆ. ಇನ್ನೊಂದೆಡೆ ಜನ ಕೈ ಬಿಡುವುದಿಲ್ಲ ಎಂಬ ನಂಬಿಕೆಯೂ ಇದೆ ’ ಎಂದರು ಕಾಡ ನಟರಾಜ್.
ಅತಿಶಯ್ ಜೈನ್ ಹಾಗೂ ಶಶಾಂಕ್ ಶೇಷಗಿರಿ ಸಂಗೀತ, ಜೀವನ್ ಗೌಡ ಛಾಯಾಚಿತ್ರಗ್ರಹಣ, ದೀಪಕ್ ಸಿ.ಎಸ್ ಸಂಕಲನ ಚಿತ್ರಕ್ಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.