ADVERTISEMENT

‘ಕರ್ತವ್ಯ’ ಕ್ಕೆ ಹಾಜರಾಗಿ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2019, 19:47 IST
Last Updated 9 ಏಪ್ರಿಲ್ 2019, 19:47 IST
ನವೀನ್‌ ದ್ವಾರಕನಾಥ್‌
ನವೀನ್‌ ದ್ವಾರಕನಾಥ್‌   

‘ಚುನಾವಣೆ ಕೂಡ ನಮ್ಮೆಲ್ಲರ ಕರ್ತವ್ಯವಾಗಬೇಕು’ ಎಂಬ ಯೋಚನೆಯನ್ನು ತಲೆಗೆ ಹಚ್ಚಿಕೊಂಡ, ನಗರದ ಟೆಕ್ಕಿ ನವೀನ್‌ ದ್ವಾರಕನಾಥ್‌ ಅವರು ಹೊಸ ವಿಧಾನದ ಮೂಲಕ ಜನರನ್ನು ತಲುಪಲು ಚಿಂತಿಸಿದರು.

ಹೊಸ ಪ್ರಯೋಗಗಳಿಗೆ ಒಳಗೊಳ್ಳುವ ಮೂಲಕ ಕ್ರಿಯಾಶೀಲತೆಯನ್ನು ಕಟ್ಟಿಕೊಡುತ್ತಿದ್ದ ನವೀನ್‌ ಅವರು ಈ ಬಾರಿ ಮ್ಯೂಸಿಕಲ್‌ ಸಿನಿಮಾದ ಹಾದಿ ಕಂಡುಕೊಂಡರು.

ಎರಡು ನಿಮಿಷದ ಕಿರುಚಿತ್ರವನ್ನು ನಿರ್ಮಿಸಿ ಅದರ ಮೂಲಕ ‘ಚುನಾವಣೆ ನಮ್ಮ ಕರ್ತವ್ಯವಾಗಬೇಕು’ ಎಂದು ಸಾರಿದರು. ತಮ್ಮ ಅನುಭವಗಳನ್ನೇ ಇಟ್ಟುಕೊಂಡು ಸ್ಕ್ರಿಪ್ಟ್‌ ಸಿದ್ದಪಡಿಸಿ ತಾವೇ ನಿರ್ಮಾಣ ಹಾಗೂ ನಿರ್ದೇಶನವನ್ನೂ ಮಾಡಿದರು.

ADVERTISEMENT

‘ಕರ್ತವ್ಯ’ ಕಿರುಚಿತ್ರ ಬೇಗನೆ ನೋಡುಗರನ್ನು ಸೆಳೆಯಿತು. ಯೂ ಟ್ಯೂಬ್‌ನಲ್ಲಿ ಈಗಾಗಲೇ ಎರಡು ಸಾವಿರಕ್ಕೂ ಹೆಚ್ಚು ಮಂದಿ ನೋಡಿ ಮೆಚ್ಚಿಕೊಂಡಿದ್ದಾರೆ.ಎಸ್‌.ಪಿ.ಅರುಣ್‌ ಸಂಗೀತ ನೀಡಿದ್ದಾರೆ. ಶರತ್‌ ಖಾದ್ರಿ ಅವರು ಕ್ಯಾಮೆರಾ ಕೆಲಸ ಮಾಡಿದ್ದಾರೆ.

ಬೈಕ್‌ ಮೂಲಕ ಕೊಡಗಿನ ಹಳ್ಳಿಗಳಲ್ಲಿ ಚಲಿಸುವ ನಾಯಕ ಸಾಗರ್‌, ದಾರಿಯಲ್ಲಿ ಸಾಕಷ್ಟು ಜನರನ್ನು ಭೇಟಿಯಾಗುತ್ತಾರೆ. ಮಕ್ಕಳ ಜೊತೆ ಆಟ ಆಡುತ್ತಾರೆ. ಶಾಲೆಯ ಶಿಕ್ಷಕರು, ರೈತರನ್ನು ಭೇಟಿಯಾಗುತ್ತಾರೆ. ಸಿಕ್ಕವರಿಗೆಲ್ಲಾ ಒಂದು ಪತ್ರ ನೀಡುತ್ತಾರೆ. ಕಿರು ಚಿತ್ರದ ಕೊನೆಯಲ್ಲಿ ಎಲ್ಲರೂ ಪತ್ರವನ್ನು ಓದಿ ನಗುತ್ತಾರೆ. ಅದರಲ್ಲಿ ‘ನಿಮ್ಮ ಮತ ನಿಮ್ಮ ಭವಿಷ್ಯ’ ಎಂದು ಬರೆದಿರುತ್ತದೆ.

ಚುನಾವಣೆಯಿಂದ ವಿಮುಖ ರಾಗುವವರಿಗಾಗಿ ಸಂದೇಶ ನೀಡುವ ಕೆಲಸವನ್ನು ಸಿನಿಮಾ ಮಾಡಿದೆ.ಯೂ ಟ್ಯೂಬ್‌ನಲ್ಲಿ ಚಿತ್ರ ನೋಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.