ಟಾಲಿವುಡ್ ನಟ ಕಾರ್ತಿ ಹೊಸ ಚಿತ್ರವೊಂದಕ್ಕೆ ಸಿದ್ಧಗೊಳ್ಳುತ್ತಿದ್ದಾರೆ. ಪಿ.ಎಸ್. ಮಿತ್ರನ್ ಅವರು ನಿರ್ದೇಶಿಸುತ್ತಿರುವ ಹೊಸ ಚಿತ್ರವಿದು. ಚಿತ್ರಕ್ಕೆ ಇನ್ನೂ ಹೆಸರಿಟ್ಟಿಲ್ಲ. ದೀಪಾವಳಿ ಸಂದರ್ಭದಲ್ಲಿ ಚಿತ್ರ ತಂಡ ಹೊಸ ಯೋಜನೆಯನ್ನು ಘೋಷಿಸಿದೆ.
ಚಿತ್ರಕ್ಕೆ ಜಿ.ವಿ. ಪ್ರಕಾಶ್ ಸಂಗೀತ ನೀಡಿದ್ದಾರೆ. ಜಾರ್ಜ್ ಸಿ. ವಿಲಿಯಮ್ಸ್ ಛಾಯಾಗ್ರಹಣ ಮತ್ತು ರುಬೆನ್ ಅವರು ಸಂಕಲನ ಮಾಡಲಿದ್ದಾರೆ. ಪ್ರಿನ್ಸ್ ಪಿಕ್ಚರ್ಸ್ ಬ್ಯಾನರ್ ಅಡಿ ಚಿತ್ರ ನಿರ್ಮಾಣ ಆಗುತ್ತಿದೆ. ಚಿತ್ರೀಕರಣ ಶೀಘ್ರ ಆರಂಭವಾಗಲಿದೆ ಎಂದು ತಂಡದ ಮೂಲಗಳು ಹೇಳಿವೆ.
‘ತಂಬಿ’ ಚಿತ್ರದ ಬಳಿಕ ‘ಸುಲ್ತಾನ್’ ಚಿತ್ರದಲ್ಲಿ ಕಾರ್ತಿ ಅವರು ನಟಿಸುತ್ತಿದ್ದಾರೆ. ಇನ್ನು ಮಣಿರತ್ನಂ ನಿರ್ದೇಶನದ ‘ಪೊನ್ನಿಯನ್ ಸೆಲ್ವನ್’ ಚಿತ್ರ ಸಿದ್ಧವಾಗುತ್ತಿದೆ.ಇದು ತಮಿಳು ಕಾದಂಬರಿ ಆಧರಿತ ಚಿತ್ರ.
ಐತಿಹಾಸಿಕ ಕಥಾ ವಸ್ತುವುಳ್ಳ ಈ ಚಿತ್ರದಲ್ಲಿ ಜಯಂ ರವಿ, ಐಶ್ವರ್ಯ ರೈ ಬಚ್ಚನ್, ಚಿಯಾನ್ ವಿಕ್ರಮ್, ತ್ರಿಶಾ ಕೃಷ್ಣನ್ ಮತ್ತಿತರರು ಇದ್ದಾರೆ. ನವೆಂಬರ್ ಅಂತ್ಯದಲ್ಲಿ ಚಿತ್ರೀಕರಣ ಮುಕ್ತಾಯಗೊಳ್ಳುವ ನಿರೀಕ್ಷೆ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.