ಬೆಂಗಳೂರು: ಕಾರ್ತಿಕ್ ಆರ್ಯನ್ ನಟನೆಯ ‘ಭೂಲ್ ಭೂಲಯ್ಯಾ 2‘ ಚಿತ್ರ ಜಾಗತಿಕವಾಗಿ ಬಾಕ್ಸ್ ಆಫೀಸ್ನಲ್ಲಿ ಅತ್ಯುತ್ತಮ ಗಳಿಕೆ ಕಂಡಿದೆ.
ಹಿಂದಿ ಚಿತ್ರರಂಗದಲ್ಲಿ ಆರಂಭದ ದಿನವೇ ₹14.11 ಕೋಟಿ ಗಳಿಕೆ ಕಂಡಿದ್ದ ಚಿತ್ರ, ಜಾಗತಿಕವಾಗಿ ಒಟ್ಟಾರೆ ₹200 ಕೋಟಿ ಗಳಿಸಿದೆ.
ಚಿತ್ರದ ಯಶಸ್ಸು ಮತ್ತು ಗಳಿಕೆಯ ಕುರಿತು ನಟ ಕಾರ್ತಿಕ್ ಆರ್ಯನ್ ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಭೂಲ್ ಭೂಲಯ್ಯಾ 2 ಚಿತ್ರ ಜಾಗತಿಕವಾಗಿ ₹200 ಕೋಟಿ ಮತ್ತು ಭಾರತದಲ್ಲಿ ₹154.82 ಕೋಟಿ ಗಳಿಕೆ ಕಂಡಿದೆ ಎಂದು ಕಾರ್ತಿಕ್ ಹೇಳಿದ್ದಾರೆ.
ಕೆಜಿಎಫ್ 2 ಮತ್ತು ಆರ್ಆರ್ಆರ್ ಸಿನಿಮಾ ಬಳಿಕ ಭೂಲ್ ಭೂಲಯ್ಯಾ 2 ಯಶಸ್ಸಿನತ್ತ ಸಾಗುತ್ತಿದೆ. ಜತೆಗೆ , ಕಮಲ್ ಹಾಸನ್ ಅಭಿನಯದ ‘ವಿಕ್ರಮ್‘ ಚಿತ್ರವೂ ಉತ್ತಮ ಗಳಿಕೆ ಕಂಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.