ADVERTISEMENT

ಎಂ.ಎಂ.ಕೀರವಾಣಿ ತಾಯಿ, ರಾಜಮೌಳಿ ಚಿಕ್ಕಮ್ಮ ಭಾನುಮತಿ ನಿಧನ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 15 ಡಿಸೆಂಬರ್ 2022, 6:31 IST
Last Updated 15 ಡಿಸೆಂಬರ್ 2022, 6:31 IST
ಭಾನುಮತಿ ಅವರೊಂದಿಗೆ ಕೀರವಾಣಿ ಕಟುಂಬ ಹಾಗೂ ರಾಜಮೌಳಿ
ಭಾನುಮತಿ ಅವರೊಂದಿಗೆ ಕೀರವಾಣಿ ಕಟುಂಬ ಹಾಗೂ ರಾಜಮೌಳಿ   

ಹೈದರಾಬಾದ್:ಭಾರತೀಯ ಚಿತ್ರರಂಗದ ಖ್ಯಾತ ನಿರ್ದೇಶಕ ಎಸ್‌.ಎಸ್‌. ರಾಜಮೌಳಿ ಚಿಕ್ಕಮ್ಮ ಹಾಗೂ ಜನಪ್ರಿಯ ಸಂಗೀತ ನಿರ್ದೇಶಕ ಎಂ.ಎಂ ಕೀರವಾಣಿ ಅವರ ತಾಯಿ ಭಾನುಮತಿ (75) ನಿಧನರಾಗಿದ್ದಾರೆ.

ಇತ್ತೀಚೆಗೆ ತೀವ್ರ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ಭಾನುಮತಿ ಅವರು ಚಿಕಿತ್ಸೆ ಫಲಿಸದೇ KIMS ಆಸ್ಪತ್ರೆಯಲ್ಲಿ ಮೃತರಾಗಿದ್ದಾರೆ ಎಂದು ಇಂಡಿಯಾ ಟುಡೇ ವರದಿ ತಿಳಿಸಿದೆ.

ಸಿನಿಮಾ ಹಿನ್ನೆಲೆಯ ಕುಟುಂಬವಾಗಿರುವ ರಾಜಮೌಳಿ ಅವರಿಗೆ ಭಾನುಮತಿ ಚಿಕ್ಕಮ್ಮ ಆಗಿದ್ದರು. ರಾಜಮೌಳಿ ನಿರ್ದೇಶಿಸಿರುವ ಎಲ್ಲ ಚಿತ್ರಗಳಿಗೆ ಭಾನುಮತಿ ಅವರ ಮಗನಾಗಿರುವ ಕೀರವಾಣಿಯವರೇ ಸಂಗೀತ ನೀಡಿರುವುದು ವಿಶೇಷ.

ADVERTISEMENT

ರಾಜಮೌಳಿ ಅವರ ಇತ್ತೀಚಿನ ಬ್ಲಾಕ್‌ಬಸ್ಟರ್ ಸಿನಿಮಾ ಆರ್‌ಆರ್‌ಆರ್‌ ಗೋಲ್ಡನ್ ಗ್ಲೋಬ್ ಅವಾರ್ಡ್‌ನ ಐದು ವಿಭಾಗಗಳಲ್ಲಿ ಪ್ರಶಸ್ತಿ ಗಳಿಸಿದೆ. ಏತನ್ಮಧ್ಯೆ ಕೀರವಾಣಿ ಅವರ ತಾಯಿ ನಿಧನರಾಗಿದ್ದು ಚಿತ್ರತಂಡದ ಪ್ರಶಸ್ತಿ ಸಂಭ್ರಮವನ್ನು ಮಂಕುಗೊಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.