ADVERTISEMENT

’ದಸರಾ’ಗೆ ಬಂದ ಕೀರ್ತಿ ಸುರೇಶ್‌: ’ಮಹಾನಟಿ’ಯ ಸಂಭಾವನೆ ₹3 ಕೋಟಿಗೆ ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2021, 11:12 IST
Last Updated 27 ಅಕ್ಟೋಬರ್ 2021, 11:12 IST
 ಕೀರ್ತಿ ಸುರೇಶ್‌
ಕೀರ್ತಿ ಸುರೇಶ್‌   

ಮಹಾನಟಿ ನಂತರ ಕೀರ್ತಿ ಸುರೇಶ್ ಜನಪ್ರಿಯತೆ ಹೆಚ್ಚಾದರೂ ಹೆಚ್ಚಿನ ಅವಕಾಶಗಳು ಸಿಗಲಿಲ್ಲ. ಸದ್ಯ ಈಗ ತೆಲುಗು,ತಮಿಳಿನಲ್ಲಿ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿರುವ ಕೀರ್ತಿ ಸುರೇಶ್‌ ತಮ್ಮ ಸಂಭಾವನೆಯನ್ನು ಹೆಚ್ಚಿಸಿಕೊಂಡಿದ್ದಾರೆ.

ತೆಲುಗಿನನ್ಯಾಚುರಲ್‌ ಸ್ಟಾರ್‌ ನಾಣಿ ಜೊತೆ ’ದಸರಾ’ ಸಿನಿಮಾದಲ್ಲಿ ನಟಿಸುತ್ತಿರುವ ಕೀರ್ತಿ ಸುರೇಶ್‌ ಈ ಚಿತ್ರಕ್ಕಾಗಿ ₹3 ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ ಎಂದು ಟಾಲಿವುಡ್‌ ಮೂಲಗಳು ತಿಳಿಸಿವೆ.

ದಕ್ಷಿಣ ಭಾರತದಲ್ಲಿ ₹ 3 ಕೋಟಿಗೂ ಹೆಚ್ಚು ಸಂಭಾವನೆ ಪಡೆಯುತ್ತಿರುವ ರಶ್ಮಿಕಾ ಮಂದಣ್ಣ, ಪೂಜಾ ಹೆಗ್ಡೆ ಅವರ ಸಾಲಿಗೆ ಇದೀಗ ಕೀರ್ತಿ ಸುರೇಶ್‌ ಅವರ ಹೆಸರು ಕೂಡ ಸೆರ್ಪಡೆಯಾಗಿದೆ.

ADVERTISEMENT

ದಸರಾ ಸಿನಿಮಾ ನಾಣಿ ಕ್ಯಾರಿಯರ್‌ನಲ್ಲೇ ಬಿಗ್‌ ಬಜೆಟ್‌ ಸಿನಿಮಾ ಎಂದು ಹೇಳಲಾಗುತ್ತಿದೆ. ಸುಧಾಕರ್‌ ಚೆರುಕುರಿ ನಿರ್ಮಾಣ ಮಾಡುತ್ತಿರುವ ಈ ಸಿನಿಮಾಗೆ ಶ್ರೀಕಾಂತ್‌ ಒಡೆಲಾ ನಿರ್ದೇಶನವಿದೆ. ಇಡೀ ಸಿನಿಮಾ ತೆಲಂಗಾಣ ಸೊಗಡಿನಿಂದ ಕೂಡಿರಲಿದೆ ಎಂದು ಚಿತ್ರತಂಡ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.