ADVERTISEMENT

ಕೆಜಿಎಫ್‌ –2: ಅಂದು ಧೀರ ಧೀರ ಈಗ ರಣ ರಣ ಧೀರ...

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2022, 9:33 IST
Last Updated 13 ಏಪ್ರಿಲ್ 2022, 9:33 IST
ಯಶ್‌
ಯಶ್‌   

ಕೆಜಿಎಫ್‌ ಚಿತ್ರದಲ್ಲಿ ಧೀರ ಧೀರ ಧೀರ ಧೀರ ಈ ಸುಲ್ತಾನಾ... ಹಾಡು ಕೇಳಿರಬಹುದು. ಈ ಹಾಡು ಚಿತ್ರದ ಸಿಗ್ನೇಚರ್‌ ಗೀತೆಯಂತೆಯೇ ಇತ್ತು. ಕೆಜಿಎಫ್‌ ಚಾಪ್ಟರ್‌ 2ನಲ್ಲಿ ಈಗ ಅದೇ ಸಾಹಿತ್ಯವನ್ನು ಸ್ವಲ್ಪ ಬದಲಾಯಿಸಿ ‘ಸುಲ್ತಾನ’ ಬಂದಿದ್ದಾನೆ.

ರಣ ರಣ ರಣ ರಣ ರಣ ಧೀರ ರುಧಿರೆಬ್ಬಿ ನಿಂತ ರಣ ಧೀರ ಲಿರಿಕಲ್‌ ಹಾಡು ಲಹರಿ ಆಡಿಯೋದ ಯುಟ್ಯೂಬ್‌ ಚಾನೆಲ್‌ನಲ್ಲಿ ಬಿಡುಗಡೆಯಾಗಿದೆ.

ಬುಧವಾರ ಬೆಳಿಗ್ಗೆ ಬಿಡುಗಡೆಯಾಗಿರುವ ಈ ಹಾಡನ್ನು ಲಕ್ಷಾಂತರ ಜನ ವೀಕ್ಷಿಸಿ ಮೆಚ್ಚುಗೆ ಸೂಚಿಸಿದ್ದಾರೆ. ಚಿತ್ರತಂಡಕ್ಕೆ ಶುಭಹಾರೈಸಿದ್ದಾರೆ.

ADVERTISEMENT

ಧೀರ ಧೀರ... ಹಾಡಿನ ಜಾಡಿನಲ್ಲೇ ಇರುವ ಹೊಸ ಹಾಡು ಸ್ವಲ್ಪ ಧಾಟಿ ಬದಲಾಯಿಸಿದೆ. ರಾಕಿಂಗ್‌ ಸ್ಟಾರ್‌ ಯಶ್‌ ನಟನೆಯ ಈ ಚಿತ್ರ ಏ. 14ರಂದು ಐದು ಭಾಷೆಗಳಲ್ಲಿ ವಿಶ್ವದಾದ್ಯಂತ ಬಿಡುಗಡೆಯಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.