ADVERTISEMENT

ಮಲ್ಪೆಯಲ್ಲಿ ಕೆಜಿಎಫ್‌–2 ಚಿತ್ರೀಕರಣ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2020, 16:32 IST
Last Updated 8 ಅಕ್ಟೋಬರ್ 2020, 16:32 IST
ಉಡುಪಿ: ಮಲ್ಪೆ ಬೀಚ್‌, ಬಂದರು, ಪಡುಕೆರೆ ಕಡಲ ತೀರದಲ್ಲಿ ಕೆಜಿಎಫ್‌–2 ಸಿನಿಮಾದ ಚಿತ್ರೀಕರಣ ಗುರುವಾರ ನಡೆಯಿತು.
ಉಡುಪಿ: ಮಲ್ಪೆ ಬೀಚ್‌, ಬಂದರು, ಪಡುಕೆರೆ ಕಡಲ ತೀರದಲ್ಲಿ ಕೆಜಿಎಫ್‌–2 ಸಿನಿಮಾದ ಚಿತ್ರೀಕರಣ ಗುರುವಾರ ನಡೆಯಿತು.   

ಉಡುಪಿ: ಮಲ್ಪೆ ಬೀಚ್‌, ಬಂದರು, ಪಡುಕೆರೆ ಕಡಲ ತೀರದಲ್ಲಿ ಕೆಜಿಎಫ್‌–2 ಸಿನಿಮಾದ ಚಿತ್ರೀಕರಣ ಗುರುವಾರ ನಡೆಯಿತು. ಚಿತ್ರದ ನಾಯಕ ಯಶ್‌ ಹಾಗೂ ನಾಯಕಿ ಶ್ರೀನಿಧಿ ಶೆಟ್ಟಿ ಶೂಟಿಂಗ್‌ನಲ್ಲಿ ಭಾಗವಹಿಸಿದ್ದರು.

ಮಲ್ಪೆ ಬೀಚ್‌ ಹಾಗೂ ಪ‍ಡುಕೆರೆ ತೀರದಲ್ಲಿ ಸೆಟ್‌ಗಳನ್ನು ಹಾಕಲಾಗಿದ್ದು, 2 ದಿನ ಚಿತ್ರೀಕರಣ ನಡೆಯಲಿದೆ. ಶೂಟಿಂಗ್ ಸುದ್ದಿ ತಿಳಿದು ನೂರಾರು ಸಾರ್ವಜನಿಕರು ಹಾಗೂ ಪ್ರವಾಸಿಗರು ಚಿತ್ರೀಕರಣ ನಡೆಯುತ್ತಿದ್ದ ಸ್ಥಳದತ್ತ ತೆರಳಲು ಪ್ರಯತ್ನಿಸಿದರು. ಆದರೆ, ಬೌನ್ಸರ್‌ಗಳು ಅವಕಾಶ ನೀಡಲಿಲ್ಲ. ಫೋಟೊಗಳನ್ನು ತೆಗೆಯಲು ಬಿಡಲಿಲ್ಲ. ಅಭಿಮಾನಿಗಳು ದೂರದಲ್ಲಿ ನಿಂತು ಚಿತ್ರೀಕರಣ ವೀಕ್ಷಿಸಿದರು.

ಐದಾರು ಸ್ಕಾರ್ಪಿಯೋ ವಾಹನಗಳು ಸಮುದ್ರ ತೀರದಲ್ಲಿ ಸುತ್ತುವರಿಯುವ ದೃಶ್ಯವನ್ನು ಸೆರೆ ಹಿಡಿಯಲಾಯಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.