ADVERTISEMENT

‘ಕೆಜಿಎಫ್’ ಆಡಿಯೊ ₹ 3.6 ಕೋಟಿಗೆ ಸೇಲ್

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2018, 19:45 IST
Last Updated 27 ನವೆಂಬರ್ 2018, 19:45 IST

‘ಅಣ್ತಮ್ಮ’ ಖ್ಯಾತಿಯ ನಟ ಯಶ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ‘ಕೆಜಿಎಫ್’ನ ಕನ್ನಡ, ತೆಲುಗು, ತಮಿಳು, ಮಲಯಾಳ ಹಾಗೂ ಹಿಂದಿ ಅವತರಣಿಕೆಯ ಟ್ರೇಲರ್ ಈಚೆಗೆ ಬಿಡುಗಡೆಗೊಂಡು ದೊಡ್ಡ ಮಟ್ಟದ ಪ್ರಶಂಸೆ ಪಡೆದುಕೊಂಡಿತ್ತು.

ಸದ್ಯ, ಇದೇ ಸಿನಿಮಾದ ಹಿಂದಿ ಅವರತಣಿಕೆ ಹೊರತು ಪಡಿಸಿದಂತೆ ಉಳಿದೆಲ್ಲ ಭಾಷೆಗಳ ಆಡಿಯೊ ಹಕ್ಕನ್ನು ಲಹರಿ ಮ್ಯೂಸಿಕ್ ಸಂಸ್ಥೆಯು ಬರೋಬ್ಬರಿ ₹ 3.6 ಕೋಟಿಗೆ ಖರೀದಿಸಿದೆ. ಸ್ಯಾಂಡಲ್‌ವುಡ್‌ನ ಸಿನಿಮಾವೊಂದರ ಆಡಿಯೊ ಹಕ್ಕುಇಷ್ಟೊಂದು ದೊಡ್ಡ ಮಟ್ಟದ ಹಣಕ್ಕೆ ಮಾರಾಟವಾಗಿರುವುದು ಇದೇ ಮೊದಲು ಎನ್ನಲಾಗಿದೆ.

ಈ ಸಿನಿಮಾದ ಹಿಂದಿ ಅವತರಣಿಕೆಯ ಆಡಿಯೊ ಹಕ್ಕು ಖರೀದಿ ಸಂಬಂಧ ಇನ್ನೂ ಮಾತುಕತೆ ನಡೆಯುತ್ತಿದ್ದು, ಅದೂ ಸಹ ಲಹರಿ ಮ್ಯೂಸಿಕ್ ಸಂಸ್ಥೆಯ ತೆಕ್ಕೆಗೆ ಬೀಳುವ ಸಾಧ್ಯತೆ ಇದೆ. ಇದೇ ತಿಂಗಳ 29 ಅಥವಾ 30ರಂದು ಹಾಡುಗಳನ್ನು ಚಿತ್ರತಂಡವು ಅಧಿಕೃತವಾಗಿ ಲಾಂಚ್ ಮಾಡಲಿದೆ.

ADVERTISEMENT

ಈಚೆಗೆ ಬಿಡುಗಡೆಗೊಂಡ ಚಿತ್ರದ ಕನ್ನಡ ಅವತರಣಿಕೆಯ ಟ್ರೇಲರ್ ಅನ್ನು 1.1 ಕೋಟಿ ಮಂದಿ ಯೂಟ್ಯೂಬ್‌ನಲ್ಲಿ ವೀಕ್ಷಣೆ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.