ADVERTISEMENT

Yash19: ಹಾಲಿವುಡ್ ನಿರ್ದೇಶಕ JJ ಪೆರ್ರಿ ಭೇಟಿಯಾದ ಯಶ್- ಅಭಿಮಾನಿಗಳಲ್ಲಿ ಕುತೂಹಲ

ಲಂಡನ್‌ನಲ್ಲಿ ಭೇಟಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 27 ಸೆಪ್ಟೆಂಬರ್ 2023, 11:37 IST
Last Updated 27 ಸೆಪ್ಟೆಂಬರ್ 2023, 11:37 IST
<div class="paragraphs"><p>JJ ಪೆರ್ರಿ,&nbsp;ಯಶ್</p></div>

JJ ಪೆರ್ರಿ, ಯಶ್

   

JJ ಪೆರ್ರಿ

ಬೆಂಗಳೂರು: ಕೆಜಿಎಫ್ ಚಾಪ್ಟರ್ 1, ಕೆಜಿಎಫ್ ಚಾಪ್ಟರ್ 2 ಯಶಸ್ಸಿನ ನಂತರ ನಟ ಯಶ್ ಅವರ ಮುಂದಿನ ಚಿತ್ರ ಯಾವುದು? ಎಂಬ ಕುತೂಹಲ ಅಭಿಮಾನಿಗಳಿಗೆ ತಣಿಯುತ್ತಿಲ್ಲ.

ADVERTISEMENT

ಇದೇ ವೇಳೆ ಯಶ್ ಇತ್ತೀಚಿಗೆ ಲಂಡನ್‌ನಲ್ಲಿ ಹಾಲಿವುಡ್‌ನ ಖ್ಯಾತ ಸಾಹಸ ನಿರ್ದೇಶಕ ಹಾಗೂ ಮಾರ್ಷಲ್ ಆರ್ಟಿಸ್ಟ್ ಮತ್ತು ಹಾಲಿವುಡ್ ಆಕ್ಷನ್ ಸಿನಿಮಾಗಳ ನಿರ್ದೇಶಕ ಜೆಜೆ ಪೆರ್ರಿ ಅವರನ್ನು ಭೇಟಿಯಾಗಿದ್ದಾರೆ.

ಈ ಭೇಟಿಯ ಚಿತ್ರವನ್ನು ಸ್ವತಃ ಜೆಜೆ ಪೆರ್ರಿ ಅವರೇ ತನ್ನ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ‘ಸಹೋದರನ ಜೊತೆ ಲಂಡನ್‌ನಲ್ಲಿ’ ಎಂದು ಬರೆದುಕೊಂಡಿದ್ದಾರೆ.

ಈ ಚಿತ್ರ ಯಶ್ ಅಭಿಮಾನಿಗಳಿಗೂ ತೀವ್ರ ಕುತೂಹಲ ಮೂಡಿಸಿದ್ದು, ಯಶ್ ಮುಂದಿನ ಚಿತ್ರ ಬಹುತೇಕ ಹಾಲಿವುಡ್‌ ಮಟ್ಟದ್ದು ಅಥವಾ ಹಾಲಿವುಡ್‌ನಲ್ಲಿ ಮಾಡಬಹುದು ಎಂದು ಚರ್ಚಿಸುತ್ತಿದ್ದಾರೆ. ಆದರೆ, ಯಶ್ ಈ ಬಗ್ಗೆ ಯಾವುದೇ ಮಾಹಿತಿ ಹಂಚಿಕೊಂಡಿಲ್ಲ.

ಕೆಜಿಎಫ್ ಸರಣಿ ಸಿನಿಮಾಗಳಲ್ಲಿ ತೊಡಗಿಸಿಕೊಂಡ ನಂತರ ಯಶ್ ಯಾವುದೇ ಚಿತ್ರಗಳನ್ನು ಮಾಡಿರಲಿಲ್ಲ. ಕಳೆದ 8 ವರ್ಷಗಳಿಂದ ಯಶ್ ಅವರ ಹೊಸ ಚಿತ್ರ ತೆರೆ ಕಾಣದಿರುವುದಕ್ಕೆ ಅಭಿಮಾನಿಗಳು ಮುನಿಸಿಕೊಂಡಿದ್ದೂ ಇದೆ. ಮೂಲಗಳ ಪ್ರಕಾರ ಯಶ್ 19 ನೇ ಸಿನಿಮಾ ಇನ್ನೇನು ಘೋಷಣೆ ಆಗಲಿದೆ ಎನ್ನಲಾಗಿದೆ.

ಕಳೆದ ವರ್ಷವೂ ಯಶ್ ಹಾಲಿವುಡ್‌ನ ಕೆಲ ನಿರ್ದೇಶಕರು ಮತ್ತು ತಂತ್ರಜ್ಞರನ್ನು ಭೇಟಿಯಾಗಿದ್ದರು.

ಜೆಜೆ ಪೆರ್ರಿ ಯಾರು?

1987 ರಿಂದಲೂ ಹಾಲಿವುಡ್ ಸಿನಿಮಾಗಳಿಗೆ ಸಾಹಸ ನಿರ್ದೇಶನ, ಸಹ ನಿರ್ದೇಶನಗಳಲ್ಲಿ ತೊಡಗಿಸಿಕೊಂಡಿರುವ ಜೆಜೆ ಪೆರ್ರಿ ಅವರು 2022 ರಲ್ಲಿ ‘ಡೇ ಶಿಫ್ಟ್‌’ ಎಂಬ ಸಿನಿಮಾ ನಿರ್ದೇಶನ ಮಾಡಿದ್ದರು. ಸದ್ಯ ಅವರು ‘ದಿ ಕಿಲ್ಲರ್ಸ್ ಗೇಮ್’ ಸಿನಿಮಾದಲ್ಲಿ ತೊಡಗಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.