ADVERTISEMENT

ದುಬೈ ಮೂಲದ ಉದ್ಯಮಿಯನ್ನು ಮದುವೆಯಾಗಲಿದ್ದಾರೆ ಕೆಜಿಎಫ್ ಸ್ಟಾರ್ ಮೌನಿ ರಾಯ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 2 ಅಕ್ಟೋಬರ್ 2021, 7:10 IST
Last Updated 2 ಅಕ್ಟೋಬರ್ 2021, 7:10 IST
ಮೌನಿ ರಾಯ್
ಮೌನಿ ರಾಯ್   

ಬೆಂಗಳೂರು: ಕಿರುತೆರೆ ಹಾಗೂ ಬಾಲಿವುಡ್ ಸ್ಟಾರ್ ಮೌನಿ ರಾಯ್ ಇತ್ತೀಚೆಗೆ ಸದಾ ಸುದ್ದಿಯಲ್ಲಿರುತ್ತಾರೆ. ಈಗ ಅವರ ಮದುವೆ ಬಗ್ಗೆ ಮಾತು ಕೇಳಿ ಬಂದಿದ್ದು ಮುಂದಿನ ವರ್ಷ ಜನವರಿಯಲ್ಲಿ ಅವರು ಮದುವೆಯಾಗಲಿದ್ದಾರೆ ಎಂದು ತಿಳಿದು ಬಂದಿದೆ.

ದುಬೈ ಮೂಲದ ಉದ್ಯಮಿ ಸೂರಜ್ ನಂಬಿಯಾರ್ ಅವರನ್ನು ಮೌನಿ ರಾಯ್ ವರಿಸಲಿದ್ದಾರೆ ಎನ್ನಲಾಗಿದೆ. ಈ ವಿಚಾರವನ್ನು ಮೌನಿ ಸಹೋದರ ವಿದ್ಯುತ್ ರಾಯ್ ಸರ್ಕಾರ್, ಪತ್ರಿಕಾ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಆದರೆ, ಮೌನಿ ಮಾತ್ರ ಈ ವಿಚಾರದಲ್ಲಿ ಮೌನ ಮುರಿದಿಲ್ಲ.

ಕೊರೊನಾ ಲಾಕ್‌ಡೌನ್ ಸಂದರ್ಭದಲ್ಲಿ ದುಬೈನಲ್ಲಿಯೇ ಇದ್ದ ಮೌನಿ, ಸೂರಜ್ ಜೊತೆ ಓಡಾಡಿಕೊಂಡಿದ್ದರು. ಸೂರಜ್‌ರನ್ನು ಮೌನಿ ಅನೇಕ ವರ್ಷಗಳಿಂದ ಪ್ರೀತಿಸುತ್ತಿದ್ದಾರೆ.

ADVERTISEMENT

ಮೌನಿ ರಾಯ್ ಕೆಜಿಎಫ್ ಚಾಪ್ಟರ್1ರ ಹಿಂದಿ ಆವೃತ್ತಿಯಲ್ಲಿ 'ಗಲೀ ಗಲೀ' ಐಟಂ ನೃತ್ಯದಲ್ಲಿ ಕಾಣಿಸಿಕೊಂಡಿದ್ದರು. ಇದು ಬಾಲಿವುಡ್‌ನಲ್ಲಿ ಅವರಿಗೆ ದೊಡ್ಡ ಹೆಸರು ತಂದು ಕೊಟ್ಟಿತ್ತು.

ಅಂದಹಾಗೇ ಮೌನಿ ರಾಯ್‌ಗೆ ಇನ್‌ಸ್ಟಾಗ್ರಾಂನಲ್ಲಿ 20 ಮಿಲಿಯನ್ ಫಾಲೋವರ್ಸ್ ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.