ADVERTISEMENT

ಫೋಟೊಶೂಟ್‌: ಕಿಯಾರ ಅಡ್ವಾಣಿಗೆ ಎಲೆಯೇ ಮೈವಸ್ತ್ರ!

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2020, 11:54 IST
Last Updated 19 ಫೆಬ್ರುವರಿ 2020, 11:54 IST
ಕಿಯಾರ ಅಡ್ವಾಣಿ
ಕಿಯಾರ ಅಡ್ವಾಣಿ   

ಮುಂಬೈ:ಖ್ಯಾತ ಪೋಟೊಗ್ರಾಫರ್ ಡಬ್ಬೂ ರತ್ನಾನಿ ಅವರ 2020ರ ಗ್ಲ್ಯಾಮರ್‌ ಕ್ಯಾಲೆಂಡರ್‌ನಲ್ಲಿ ಬಾಲಿವುಡ್‌ ನಟಿ ಕಿಯಾರ ಅಡ್ವಾಣಿ ಕಾಣಿಸಿಕೊಂಡಿದ್ದಾರೆ.

ಹೌದು, ಕಿಯಾರ ಅಡ್ವಾಣಿ ಅವರ ಮೈಮಾಟಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಎದೆಗೆ ಒಂದು ಎಲೆ (ಬಾಳೆ ಎಲೆ ರೀತಿಯದ್ದು)ಇಟ್ಟುಕೊಂಡು ಪೋಸ್‌ ಕೊಟ್ಟಿದ್ದಾರೆ. ಈ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂನಲ್ಲಿಕಿಯಾರ ಅಡ್ವಾಣಿ ಆ ಫೋಟೊವನ್ನು ಹಂಚಿಕೊಂಡಿದ್ದಾರೆ. ಈ ಫೋಟೊ ಶೇರ್ ಮಾಡಿದ 21 ಗಂಟೆಗಳಲ್ಲಿ ಸುಮಾರು 19 ಲಕ್ಷಕ್ಕೂ ಹೆಚ್ಚು ಜನರು ವೀಕ್ಷಣೆ ಮಾಡಿದ್ದಾರೆ.

ADVERTISEMENT

ನಿನ್ನೆಯಷ್ಟೇ ಬಾಲಿವುಡ್‌ನ ಭೂಮಿ ಪಡ್ನೆಕರ್‌ ಅವರ ಫೋಟೊ ವೈರಲ್‌ ಆಗಿತ್ತು. ಅವರು ಬಾತ್‌ ಟಬ್‌ನಲ್ಲಿ ಟಾಪ್‌ ಲೆಸ್‌ ಆಗಿ ಕಾಣಿಸಿಕೊಂಡಿದ್ದರು.ಡಬ್ಬೂ ರತ್ನಾನಿ ಅವರ ಗ್ಯ್ಲಾಮರ್‌ ಕ್ಯಾಲೆಂಡರ್‌ನಲ್ಲಿ ವಿದ್ಯಾಬಾಲನ್‌ ಸೇರಿದಂತೆ ಹಲವಾರು ಬಾಲಿವುಡ್‌ ನಟಿಯರು ಕಾಣಿಸಿಕೊಂಡಿದ್ದರು. 2020ರ ಕ್ಯಾಲೆಂಡರ್‌ನಲ್ಲಿ ಪೋಸ್‌ ನೀಡಿದ ನಟಿಯರು ಅರೆ ಬೆತ್ತಲೆಯಾಗಿ ಕಾಣಿಸಿಕೊಂಡಿರುವುದು ವಿಶೇಷ.

ಕಿಯಾರ ಅಡ್ವಾಣಿ ಅವರ ಇತರೆ ಫೋಟೊಗಳು...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.