ಬಾಲಿವುಡ್ ನಟಿ ಕಿಯಾರ ಅಡ್ವಾಣಿ ಹಾಗೂ ನಟ ಸಿದ್ಧಾರ್ಥ್ ಮಲ್ಹೋತ್ರಾ ಅವರು ತಮ್ಮ ಮಗಳಿಗೆ ‘ಸರಾಯಾ ಮಲ್ಹೋತ್ರಾ’ ಎಂದು ನಾಮಕರಣ ಮಾಡಿದ್ದಾರೆ. ಈ ಕುರಿತು ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಂನಲ್ಲಿ ದಂಪತಿ ಮಾಹಿತಿ ಹಂಚಿಕೊಂಡಿದ್ದಾರೆ.
ಜೋಡಿ ತಮ್ಮ ಮಗುವಿಗೆ ಕಾಲುಚೀಲ ಧರಿಸಿದ ಚಿತ್ರವನ್ನು ಹಂಚಿಕೊಂಡು, ‘ನಮ್ಮ ಪ್ರಾರ್ಥನೆಗಳಿಂದ.. ದೇವರ ಆಶೀರ್ವಾದದಿಂದ.. ನಮ್ಮ ತೋಳುಗಳಲ್ಲಿ.. ನಮ್ಮ ರಾಜಕುಮಾರಿ’ ಎಂದು ಬರೆದುಕೊಂಡಿದ್ದಾರೆ.
2023ರಲ್ಲಿ ಫೆಬ್ರುವರಿ 7ರಂದು ರಾಜಸ್ಥಾನದಲ್ಲಿ ಕಿರಾ ಅಡ್ವಾಣಿ ಹಾಗೂ ನಟ ಸಿದ್ಧಾರ್ಥ್ ಮಲ್ಹೋತ್ರಾ ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು.
ಈ ಜೋಡಿ ‘ಶೇರ್‌ಷಾ’ ಎಂಬ ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದಾರೆ.
ನಟ ಸಿದ್ಧಾರ್ಥ್ ಅವರು 'ಪರಮ್ ಸುಂದರಿ' ಚಿತ್ರದಲ್ಲಿ ಇತ್ತೀಚೆಗೆ ನಟಿಸಿದ್ದಾರೆ. ಸದ್ಯ ಕಿಯಾರಾ ಅವರು ಹೃತಿಕ್ ರೋಷನ್ ಹಾಗೂ ಜೂನಿಯರ್ ಎನ್‌ಟಿಆರ್ ಅವರ ಜತೆಗೆ ಅಯನ್ ಮುಖರ್ಜಿ ನಿರ್ದೇಶನದ ‘ವಾರ್ 2’ ಚಿತ್ರದಲ್ಲಿ ನಟಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.