ಡಾಲಿ ಧನಂಜಯ್ ನಟಿಸಿದ 25ನೇ ಚಿತ್ರ ಗುರುದೇವ ಹೊಯ್ಸಳ ಚಿತ್ರದ ಬಹುನಿರೀಕ್ಷಿತ ಟ್ರೇಲರ್ ಬಿಡುಗಡೆಯಾಗಿದೆ. ಟ್ರೇಲರ್ ನೋಡಿದ ಕಿಚ್ಚ ಸುದೀಪ್ ಕಾರ್ಯಕ್ರಮದಲ್ಲಿ ಟ್ರೇಲರ್ ಮೂಡಿಬಂದಿರುವ ರೀತಿಯನ್ನು ಮೆಚ್ಚಿದರು. ಡಾಲಿ ಧನಂಜಯ್‌ಗೆ ಪೊಲೀಸ್ ಪಾತ್ರ ಮಾಡಿಸಿದ್ದೀರಿ ಆದರೆ ಚಿತ್ರದಲ್ಲಿ ಅವರಿಗೆ ಮೀಸೆಯೇ ಇಲ್ಲ. ಮೀಸೆ ಇದ್ದಿದ್ದರೆ ಅದು ಇನ್ನೂ ಚೆನ್ನಾಗಿ ಮೂಡಿಬರುತ್ತಿತ್ತು ಎಂದು ಗುರುದೇವ ಹೊಯ್ಸಳ ಚಿತ್ರದ ನಿರ್ದೇಶಕ ವಿಜಯ್ ಎನ್ ಅವರಿಗೆ ಸುದೀಪ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.