ಮೈಕೆಲ್ ಮ್ಯಾಡ್ಸೆನ್
ಬೆಂಗಳೂರು: ಹಾಲಿವುಡ್‌ನ ಖ್ಯಾತ ನಟ ಮೈಕೆಲ್ ಮ್ಯಾಡ್ಸೆನ್ (67) ಅವರು ತೀವ್ರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಮೈಕೆಲ್, ಕ್ಯಾಲಿಪೋರ್ನಿಯಾದ ಮಾಲಿಬು ನಗರದ ಅವರ ಮನೆಯಲ್ಲಿ ಶುಕ್ರವಾರ ಕುಸಿದು ಬಿದ್ದು ಮೃತರಾಗಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.
Kill Bill, Reservoir Dogs, Upon a Time... in Hollywood ಅವರ ಪ್ರಮುಖ ಚಿತ್ರಗಳು. ಅವರು ಹಾಲಿವುಡ್‌ನ 60 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದರು.
ಮೈಕೆಲ್ ಮ್ಯಾಡ್ಸೆನ್ 1957 ರಲ್ಲಿ ಚಿಕಾಗೊದಲ್ಲಿ ಜನಿಸಿದ್ದರು. ಸಿನಿಮಾಗಳಲ್ಲದೇ, ರಿಯಾಲಿಟಿ ಶೋ, ವೆಬ್ ಸಿರೀಸ್, ಟಿವಿ ಸಿರೀಸ್, ಡಾಕ್ಯುಮೆಂಟರಿಗಳಲ್ಲಿ ಅವರು ನಟಿಸಿ ಹಾಲಿವುಡ್‌ನಲ್ಲಿ ಜನಪ್ರಿಯರಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.