ADVERTISEMENT

ನ.15ರಂದು ಪಟಾಕಿ ಪೋರಿಯೋ ಹಾಡು ಬಿಡುಗಡೆ

ಕಿಚ್ಚ ಸುದೀಪ್‌ ನಟನೆಯ ಕೋಟಿಗೊಬ್ಬ-3 ಚಿತ್ರ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2020, 11:42 IST
Last Updated 8 ನವೆಂಬರ್ 2020, 11:42 IST
ಪಟಾಕಿ ಪೋರಿಯೋ ಹಾಡಿನ ಪೋಸ್ಟರ್‌ (ಟ್ವಿಟರ್‌ ಚಿತ್ರ)
ಪಟಾಕಿ ಪೋರಿಯೋ ಹಾಡಿನ ಪೋಸ್ಟರ್‌ (ಟ್ವಿಟರ್‌ ಚಿತ್ರ)   

ಕಿಚ್ಚ ಸುದೀಪ್‌ ನಟನೆಯ ಕೋಟಿಗೊಬ್ಬ-3ಚಿತ್ರದ ಪಟಾಕಿ ಪೋರಿಯೋ ಹಾಡಿನ ಸಾಹಿತ್ಯ ಸಹಿತ ವಿಡಿಯೋ ನ.15ರಂದು ಬಿಡುಗಡೆ ಆಗಲಿದೆ.

ಹಾಡಿನ ದೃಶ್ಯದಲ್ಲಿಸುದೀಪ್‌ ಮತ್ತು ಆಶಿಕಾ ರಂಗನಾಥ್‌ ಕಾಣಿಸಿಕೊಂಡಿದ್ದಾರೆ. ವಿಜಯ ಪ್ರಕಾಶ್‌ ಮತ್ತು ಅನುರಾಧಾಭಟ್‌ ಹಾಡಿದ್ದಾರೆ. ಅನೂಪ್‌ ಭಂಡಾರಿ ಹಾಡಿನ ಸಾಹಿತ್ಯ ಬರೆದಿದ್ದಾರೆ.

ಈಗಾಗಲೇ ಹಾಡಿನ ಒಂದು ಸಾಲಿನ ತುಣುಕು ಯುಟ್ಯೂಬ್‌ನಲ್ಲಿ ಹರಿದಾಡುತ್ತಿದೆ. ಅಧಿಕೃತ ಬಿಡುಗಡೆ ಇನ್ನಷ್ಟೇ ಆಗಬೇಕಿದೆ. ಸೂರಪ್ಪ ಬಾಬು ಈ ಚಿತ್ರದ ನಿರ್ಮಾಪಕರು.

ADVERTISEMENT

ಸುದೀಪ್‌ ಜತೆಗೆ ಮಡೊನ್ನಾ ಸೆಬಾಸ್ಟಿಯನ್‌, ಅಫ್ತಾಬ್‌ ಶಿವದಾಸಿ, ನವಾಬ್‌ ಷಾ ಮತ್ತು ಶ್ರದ್ಧಾ ದಾಸ್‌ ಕೂಡಾ ತೆರೆಯಲ್ಲಿ ಮಿಂಚಲಿದ್ದಾರೆ.

ಚಿತ್ರವನ್ನು ಶಿವಕಾರ್ತಿಕ್‌ ಅವರು ನಿರ್ದೇಶಿಸಿದ್ದಾರೆ. ಈ ಬಾರಿಯ ಬಹು ನಿರೀಕ್ಷಿತ ಚಿತ್ರವಿದು. ಕೋವಿಡ್‌ ಕಾರಣಕ್ಕೆ ಚಿತ್ರೀಕರಣ ತಡವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.