ನಟ ಯಶ್ ಅವರ ತಾಯಿ ಪುಷ್ಪ ಅರುಣ್ ಕುಮಾರ್ ನಿರ್ಮಿಸಿರುವ ‘ಕೊತ್ತಲವಾಡಿ’ ಚಿತ್ರದ ಟೀಸರ್ ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ. ನಟ ಶರಣ್ ಟೀಸರ್ ಬಿಡುಗಡೆ ಮಾಡಿ ತಂಡಕ್ಕೆ ಶುಭ ಹಾರೈಸಿದರು. ಚಿತ್ರಕ್ಕೆ ಶ್ರೀರಾಜ್ ಆ್ಯಕ್ಷನ್ ಕಟ್ ಹೇಳಿದ್ದಾರೆ.
‘ಒಂದು ಹೊಸ ಪಯಣದ ವೈಬ್ ಇಲ್ಲಿ ಕಾಣಿಸುತ್ತಿದೆ. ಈ ಚಿತ್ರಕ್ಕೆ ಕೆಲಸ ಮಾಡಿರುವವರಲ್ಲಿ ಕುತೂಹಲ, ಪಾಸಿಟಿವ್ ಎನರ್ಜಿ, ಭಕ್ತಿ, ಆತ್ಮೀಯತೆ, ಪ್ರೀತಿ ಕಾಣುತ್ತಿದೆ. ಇಂಥ ತಂಡವಿದ್ದಲ್ಲಿ ಯಶಸ್ಸು ತಾನಾಗಿಯೇ ಬರುತ್ತದೆ’ ಎಂದರು ಶರಣ್.
ನಟ ಪೃಥ್ವಿ ಅಂಬರ್‌ಗೆ ನಟಿ ಕಾವ್ಯ ಜೋಡಿಯಾಗಿದ್ದಾರೆ. ‘ಕೆಲಸ ಮಾತನಾಡಬೇಕು. ನಾವು ಮಾತನಾಡಬಾರದು. ಯಶ್ ಮನೆ ಸಿನಿಮಾ ಎಂದರೆ ಇಡೀ ದೇಶ ನೋಡುತ್ತದೆ. ಹೀಗಾಗಿ ಅದಕ್ಕೆ ತಕ್ಕ ರೀತಿ ಮಾಡಿ ಎಂದು ನಿರ್ದೇಶಕರಿಗೆ ಸ್ವತಂತ್ರ ನೀಡಿರುವೆ.
‘ಕೆವಿ ರಾಜು, ರವಿಶ್ರೀವತ್ಸ ಜತೆ ಕೆಲಸ ಮಾಡಿರುವೆ. ಸ್ವತಂತ್ರ ನಿರ್ದೇಶಕನಾಗಿ ಮೊದಲ ಸಿನಿಮಾ. ಹಳ್ಳಿಯ ಸೊಡಗಿರುವ ಕಥೆ. ನಾಯಕ ಹಳ್ಳಿಯ ಮುಗ್ದ ಹುಡುಗ. ಆದರೆ ತುಂಬ ಬಲಶಾಲಿ. ಒಂದು ಊರಿನಲ್ಲಿ ನಡೆಯುವ ಹೋರಾಟದ ಕಥೆ. ಚಿತ್ರೀಕರಣ ಮುಗಿದು ಪೋಸ್ಟ್‌ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದೆ’ ಎಂದರು ನಿರ್ದೇಶಕರು.
ಗೋಪಾಲಕೃಷ್ಣ ದೇಶಪಾಂಡೆ, ರಾಜೇಶ್ ನಟರಂಗ ಮುಂತಾದವರು ಚಿತ್ರದಲ್ಲಿದ್ದಾರೆ. ವಿಕಾಸ್ ವಸಿಷ್ಠ ಸಂಗೀತ, ಅಭಿನಂದನ್ ಕಶ್ಯಪ್ ಹಿನ್ನೆಲೆ ಸಂಗೀತ, ಕಾರ್ತಿಕ್ ಎಸ್ ಛಾಯಾಚಿತ್ರಗ್ರಹಣ, ರಾಮಿಸೆಟ್ಟಿ ಪವನ್ ಸಂಕಲನ, ರಘು ನಿಡುವಳ್ಳಿ ಸಂಭಾಷಣೆ ಈ ಚಿತ್ರಕ್ಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.