
ನವದೆಹಲಿ: ಹಾಲಿವುಡ್‌ನಲ್ಲಿ ನಟಿಯರನ್ನು ನಡೆಸಿಕೊಳ್ಳುತ್ತಿರುವ ರೀತಿ ಬಗ್ಗೆ ನಟಿ, ನಿರ್ದೇಶಕಿ ಕ್ರಿಸ್ಟನ್ ಸ್ಟೀವರ್ಟ್ ಟೀಕಿಸಿದ್ದಾರೆ. ಹಾಲಿವುಡ್‌ನಲ್ಲಿ ನಟಿಯರನ್ನು ಕೈಗೊಂಬೆಗಳಂತೆ ನಡೆಸಿಕೊಳ್ಳುತ್ತಾರೆ ಎಂದು ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
‘ದಿ ಕ್ರೋನಾಲಜಿ ಆಫ್ ವಾಟರ್’ನ ನಿರ್ದೇಶಕಿಯಾಗಿ ನಿರ್ದೇಶನಕ್ಕೆ ಅಡಿ ಇಟ್ಟಿರುವ ಕ್ರಿಸ್ಟನ್, ‘ಹಾಲಿವುಡ್‌ನಲ್ಲಿ ನಟಿಯರನ್ನು ಕೆಟ್ಟದಾಗಿ ನಡೆಸಿಕೊಳ್ಳಲಾಗುತ್ತದೆ, ನಾನು ಅದನ್ನು ನಿಮಗೆ ಹೇಳಲೇಬೇಕು. ಯಾರಾದರೂ ನಟಿಯಾಗಬಹುದು ಎಂದು ಅಲ್ಲಿನ ಜನರು ಭಾವಿಸುತ್ತಾರೆ. ಆದರೆ, ನಾನು ನಿರ್ದೇಶಕಿಯಾಗಿ ನನ್ನ ಚಿತ್ರದ ಬಗ್ಗೆ ಮಾತನಾಡಲು ಕುಳಿತಾಗ ಭಿನ್ನ ಅನುಭವವಾಯಿತು. ನಾನು ಬುದ್ಧಿವಂತಳು ಎಂಬಂತೆ ಅವರು ನನ್ನೊಂದಿಗೆ ಮಾತನಾಡುತ್ತಿದ್ದಾರೆ’ಎಂದು ನಟಿ ಹೇಳಿದ್ದಾರೆ.
ನಟಿ ಮತ್ತು ನಿರ್ದೇಶಕಿ ಸ್ಟೀವರ್ಟ್, ಉದ್ಯಮದ ಇಗೊ ಬಗ್ಗೆ ಹೊಸ ದೃಷ್ಟಿಕೋನವನ್ನು ನೀಡಿದ್ದಾರೆ. ನಿರ್ದೇಶಕರಿಗೆ ಮಾಂತ್ರಿಕ ಶಕ್ತಿಗಳು ಇವೆ ಎಂಬ ಉದ್ಯಮದ ಕಲ್ಪನೆಯನ್ನು ತಳ್ಳಿಹಾಕಿದ ಸ್ಟೀವರ್ಟ್, ಅದನ್ನು ಪುರುಷರು ಜೀವಂತವಾಗಿಟ್ಟಿರುವ ಪುರಾಣ ಎಂದು ಜರಿದಿದ್ದಾರೆ. ನಟಿಯರು ನಡೆಸುವ ಹೋರಾಟಗಳ ಬಗ್ಗೆ ಗಮನಸೆಳೆದ ಅವರು, ನಟಿಯರನ್ನು ಸಹಕಲಾವಿದರಂತೆ ಕಾಣದೆ ಕೈಗೊಂಬೆಗಳಂತೆ ಪರಿಗಣಿಸಲಾಗುತ್ತಿದೆ ಎಂದು ವಿವರಿಸಿದ್ದಾರೆ.
ಹಾಲಿವುಡ್‌ನಲ್ಲಿ ನಟಿಯರು ಎದುರಿಸುತ್ತಿರುವ ಪರಿಸ್ಥಿತಿಗಳ ಬಗ್ಗೆ ಕ್ರಿಸ್ಟನ್ ಸ್ಟೀವರ್ಟ್ ಧ್ವನಿ ಎತ್ತಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಮಾತನಾಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.