ADVERTISEMENT

L2-Empuraan: ತೆರೆಗೆ ಬರಲು ಸಜ್ಜಾದ ‘ಲೂಸಿಫರ್‌’ನ ಎರಡನೇ ಅವತಾರ– ಟೀಸರ್‌ ನೋಡಿ

2019ರಲ್ಲಿ ತೆರೆಕಂಡಿದ್ದ ಪೃಥ್ವಿರಾಜ್‌ ಸುಕುಮಾರನ್‌ ನಿರ್ದೇಶನದ, ಮೋಹನ್‌ಲಾಲ್‌ ನಟನೆಯ ‘ಲೂಸಿಫರ್‌’ ಸಿನಿಮಾ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು.

​ಪ್ರಜಾವಾಣಿ ವಾರ್ತೆ
Published 28 ಜನವರಿ 2025, 11:29 IST
Last Updated 28 ಜನವರಿ 2025, 11:29 IST
<div class="paragraphs"><p>L2-Empuraan: ತೆರೆಗೆ ಬರಲು ಸಜ್ಜಾದ ‘ಲೂಸಿಫರ್‌’ನ ಎರಡನೇ ಅವತಾರ– ಟೀಸರ್‌ ನೋಡಿ</p></div>

L2-Empuraan: ತೆರೆಗೆ ಬರಲು ಸಜ್ಜಾದ ‘ಲೂಸಿಫರ್‌’ನ ಎರಡನೇ ಅವತಾರ– ಟೀಸರ್‌ ನೋಡಿ

   

ಬೆಂಗಳೂರು: 2019ರಲ್ಲಿ ತೆರೆಕಂಡಿದ್ದ ಪೃಥ್ವಿರಾಜ್‌ ಸುಕುಮಾರನ್‌ ನಿರ್ದೇಶನದ, ಮೋಹನ್‌ಲಾಲ್‌ ನಟನೆಯ ‘ಲೂಸಿಫರ್‌’ ಸಿನಿಮಾ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು.

ಇದೀಗ ಆ ಸಿನಿಮಾದ ಮುಂದುವರಿದ ಭಾಗ ‘ಎಲ್‌–2: ಎಂಪುರಾನ್‌’ ಚಿತ್ರಮಂದಿರಗಳಲ್ಲಿ ಬಿಡುಗಡೆಗೆ ಸಜ್ಜಾಗುತ್ತಿದೆ. 

ADVERTISEMENT

ಇತ್ತೀಚೆಗೆ ಕೊಚ್ಚಿಯಲ್ಲಿ ಚಿತ್ರದ ಟೀಸರ್‌ ಅನ್ನು ನಟ ಮಮ್ಮುಟ್ಟಿ ಬಿಡುಗಡೆಗೊಳಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಆಗಿದೆ.

ಈ ಸಿನಿಮಾವನ್ನು ‘ಪೊನ್ನಿಯನ್‌ ಸೆಲ್ವನ್‌’ ಸರಣಿ, ‘ವೇಟ್ಟಿಯನ್‌’ ಮುಂತಾದ ಚಿತ್ರಗಳನ್ನು ನಿರ್ಮಾಣ ಮಾಡಿದ್ದ ಲೈಕಾ ಪ್ರೊಡಕ್ಷನ್ಸ್‌ ನಿರ್ಮಾಣ ಮಾಡುತ್ತಿದೆ. ಈ ಮೂಲಕ ಮಲಯಾಳ ಚಿತ್ರರಂಗಕ್ಕೂ ತಮಿಳಿನ ಲೈಕಾ ಪ್ರೊಡಕ್ಷನ್ಸ್‌ ಹೆಜ್ಜೆ ಇಟ್ಟಿದೆ.

ಟೀಸರ್‌ನಲ್ಲಿ ‘ಸ್ಟೀಫನ್ ನೆಡುಂಪಲ್ಲಿ’ ಪಾತ್ರದಲ್ಲಿ ಮೋಹನ್‌ಲಾಲ್ ಅಬ್ಬರಿಸಿದ್ದು, ನಿರ್ದೇಶನದ ಜೊತೆಗೆ ಪೃಥ್ವಿರಾಜ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇಂದ್ರಜಿತ್ ಸುಕುಮಾರನ್, ಟೊವಿನೋ ಥಾಮಸ್, ಮಂಜು ವಾರಿಯರ್, ಸಾನಿಯಾ ಅಯ್ಯಪ್ಪನ್, ಸಾಯಿ ಕುಮಾರ್ ಮತ್ತು ಬೈಜು ಸಂತೋಷ್ ಚಿತ್ರದ ತಾರಾಬಳಗದಲ್ಲಿದ್ದಾರೆ.

ಚಿತ್ರಕ್ಕೆ ಮುರಳಿ ಗೋಪಿ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ಸಿನಿಮಾ ಮಲಯಾಳ, ತೆಲುಗು, ತಮಿಳು, ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಮಾರ್ಚ್‌ 27ರಂದು ಬಿಡುಗಡೆಯಾಗಲಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.