ADVERTISEMENT

ಲ್ಯಾಂಡ್‌ಲಾರ್ಡ್ ಸಿನಿಮಾ ಜ.23ರಂದು ತೆರೆಗೆ: 'ನಿಂಗವ್ವ ನಿಂಗವ್ವ' ಎಂದ ರಾಚಯ್ಯ!

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2025, 23:30 IST
Last Updated 22 ಡಿಸೆಂಬರ್ 2025, 23:30 IST
<div class="paragraphs"><p>ದುನಿಯಾ ವಿಜಯ್‌, ರಚಿತಾ ರಾಮ್‌&nbsp;</p></div>

ದುನಿಯಾ ವಿಜಯ್‌, ರಚಿತಾ ರಾಮ್‌ 

   

‘ಕಾಟೇರ’ ಸಿನಿಮಾದ ಕಥೆಗಾರ ಜಡೇಶ ಕೆ. ಹಂಪಿ ನಿರ್ದೇಶನದ, ‘ದುನಿಯಾ’ ವಿಜಯ್‌ ನಟನೆಯ ಸಿನಿಮಾ ‘ಲ್ಯಾಂಡ್‌ಲಾರ್ಡ್‌’ ಸಿನಿಮಾ ಜ.23ರಂದು ತೆರೆಕಾಣಲಿದೆ. ಸಿನಿಮಾದ ‘ನಿಂಗವ್ವ ನಿಂಗವ್ವ’ ಎಂಬ ಹಾಡು ಇತ್ತೀಚೆಗೆ ಬಿಡುಗಡೆಯಾಯಿತು. 

ನಿರ್ದೇಶಕ ಯೋಗರಾಜ್‌ ಭಟ್‌ ಅವರು ಬರೆದಿರುವ ಈ ಹಾಡಿಗೆ ವಿಜಯ್‌ ಪ್ರಕಾಶ್‌ ಹಾಗೂ ಅನನ್ಯ ಭಟ್‌ ದನಿಯಾಗಿದ್ದಾರೆ. ಅಜನೀಶ್‌ ಲೋಕನಾಥ್‌ ಸಂಗೀತ ನೀಡಿರುವ ಈ ಹಾಡಿನಲ್ಲಿ ದುನಿಯಾ ವಿಜಯ್‌ ಹಾಗೂ ರಚಿತಾ ರಾಮ್‌ ನಟಿಸಿದ್ದಾರೆ. ಸಿನಿಮಾದಲ್ಲಿ ಹಳ್ಳಿಯ ದಂಪತಿ ರಾಚಯ್ಯ–ನಿಂಗವ್ವಳಾಗಿ ಕಾಣಿಸಿಕೊಂಡಿರುವ ಇವರಿಬ್ಬರಿಗೆ ಭೂಷಣ್‌ ನೃತ್ಯ ನಿರ್ದೇಶನ ಮಾಡಿದ್ದಾರೆ. ಸ್ಯಾಂಡಲ್‌ವುಡ್‌ನ ತಾರಾ ದಂಪತಿಗಳಾದ ‘ನೆನಪಿರಲಿ’ ಪ್ರೇಮ್-ಜ್ಯೋತಿ, ಡಾರ್ಲಿಂಗ್ ಕೃಷ್ಣ-ಮಿಲನ ನಾಗರಾಜ್ ಹಾಗೂ ತರುಣ್ ಸುಧೀರ್ - ಸೋನಾಲ್ ಅವರು ಹಾಡು ಬಿಡುಗಡೆ ಮಾಡಿದ್ದು ವಿಶೇಷವಾಗಿತ್ತು. 

ADVERTISEMENT

‘ನನ್ನ ಹಿಟ್ ಹಾಡುಗಳ ಪಟ್ಟಿಯಲ್ಲಿ ಅತ್ಯಧಿಕ ಹಾಡುಗಳನ್ನು ಬರೆದಿರುವವರು ಯೋಗರಾಜ್ ಭಟ್ ಅವರು. ಈ ಹಾಡನ್ನೂ ಅದ್ಭುತವಾಗಿ ಬರೆದಿದ್ದಾರೆ. ಅಷ್ಟೇ ಚೆನ್ನಾಗಿ ವಿಜಯ್ ಪ್ರಕಾಶ್ ಹಾಡಿದ್ದಾರೆ. ಸಾಮಾನ್ಯವಾಗಿ ನಾಯಕಿಯರು ಈ ವಯಸ್ಸಿನ ಪಾತ್ರ ಒಪ್ಪಿಕೊಳ್ಳುವುದು ವಿರಳ. ಆದರೆ ರಚಿತಾ ರಾಮ್ ಅವರು ಒಪ್ಪಿಕೊಂಡು ಈ ಪಾತ್ರ ಮಾಡಿದ್ದಾರೆ’ ಎಂದರು ದುನಿಯಾ ವಿಜಯ್‌. 

ಜಡೇಶ ಕೆ.ಹಂಪಿ ಮಾತನಾಡಿ, ‘ದುನಿಯಾ ವಿಜಯ್‌ ಹಾಗೂ ಯೋಗರಾಜ್ ಭಟ್ ಅವರ ಕಾಂಬಿನೇಶನ್‌ನಲ್ಲಿ ಬಂದಿರುವ ಎಲ್ಲಾ ಹಾಡುಗಳು ಸೂಪರ್‌ಹಿಟ್ ಆಗಿವೆ. ಈಗ ಆ ಸಾಲಿಗೆ ‘ನಿಂಗವ್ವ’ ಕೂಡ ಸೇರಲಿದೆ. ನನ್ನ ಹಿಂದಿನ ಎರಡು ಚಿತ್ರಗಳಿಗೂ ಸಂಗೀತ ಸಂಯೋಜಿಸಿದ್ದ ಅಜನೀಶ್ ಅವರೇ ಈ ಚಿತ್ರಕ್ಕೂ ಸಂಗೀತ ನೀಡಿದ್ದಾರೆ’ ಎಂದರು. 

ಸಾರಥಿ ಫಿಲಂಸ್ ಲಾಂಛನದಲ್ಲಿ ಕೆ.ವಿ. ಸತ್ಯಪ್ರಕಾಶ್ ಹಾಗೂ ಹೇಮಂತ್ ಗೌಡ ಕೆ.ಎಸ್ ನಿರ್ಮಿಸಿರುವ ಈ ಸಿನಿಮಾಗೆ ಸ್ವಾಮಿ ಜೆ. ಗೌಡ ಛಾಯಾಚಿತ್ರಗ್ರಹಣವಿದೆ. ಸಿನಿಮಾದಲ್ಲಿ ಖಳನಾಯಕನಾಗಿ ನಟ ರಾಜ್‌ ಬಿ.ಶೆಟ್ಟಿ ನಟಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.