ADVERTISEMENT

ಲೈಗರ್‌ ಚಿತ್ರ ಟೀಸರ್‌: ಮಾಸ್‌ ಅವತಾರದಲ್ಲಿ ವಿಜಯ್‌ ದೇವರಕೊಂಡ 

​ಪ್ರಜಾವಾಣಿ ವಾರ್ತೆ
Published 1 ಜನವರಿ 2022, 8:16 IST
Last Updated 1 ಜನವರಿ 2022, 8:16 IST
   

ಮುಂಬೈ: ತೆಲುಗು ಚಿತ್ರರಂಗದ ಸ್ಟಾರ್ ನಟ ವಿಜಯ್ ದೇವರಕೊಂಡ ಅಭಿನಯದ ಪ್ಯಾನ್ ಇಂಡಿಯಾ ‘ಲೈಗರ್’ ಸಿನಿಮಾದ ಟೀಸರ್‌ ಬಿಡುಗಡೆಯಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ.

ಯುಟ್ಯೂಬ್‌ನಲ್ಲಿ ಬಿಡುಗಡೆಯಾಗಿ 24 ಗಂಟೆಗಳಲ್ಲಿ 1.6 ಕೋಟಿ ವೀಕ್ಷಣೆ ಪಡೆಯುವ ಮೂಲಕ ದಾಖಲೆ ನಿರ್ಮಾಣ ಮಾಡಿದೆ. ಇನ್ನು ಟೀಸರ್‌ ಅನ್ನು ಸಿನಿ ಪ್ರೇಮಿಗಳು ಹಾಗೂ ವಿಜಯ್‌ ದೇವರಕೊಂಡ ಅಭಿಮಾನಿಗಳು ಇಷ್ಟಪಟ್ಟಿದ್ದಾರೆ. ಬಾಕ್ಸಿಂಗ್ ಪಟುವಾಗಿ ಕಾಣಿಸಿಕೊಂಡಿರುವ ವಿಜಯ್ ದೇವರಕೊಂಡ ಲುಕ್​ಗೆ ಪ್ರೇಕ್ಷರು ಮಾರುಹೋಗಿದ್ದಾರೆ.

ಬಾಕ್ಸಿಂಗ್ ಲೆಜೆಂಡ್ ಮೈಕ್ ಟೈಸನ್ ಹಾಗೂ ಬಾಲಿವುಡ್ ಬೆಡಗಿ ಅನನ್ಯಾ ಪಾಂಡೆ ಜೊತೆ ವಿಜಯ್‌ ನಟಿಸಿದ್ದಾರೆ.

ADVERTISEMENT

ಟೀಸರ್‌ನಲ್ಲಿ ವಿಜಯ್‌ ದೇವರಕೊಂಡ ಟೀ ಮಾರಾಟ ಮಾಡಿ, ಕಷ್ಟಪಟ್ಟು ಬಾಕ್ಸಿಂಗ್‌ ತರಬೇತಿ ಪಡೆದು ಭಾರತವನ್ನು ಪ್ರತಿನಿಧಿಸುವ ದೃಶ್ಯವಿದೆ. ಈ ಚಿತ್ರ ಆಗಸ್ಟ್ 25ರಂದು ತೆರೆಗೆ ಅಪ್ಪಳಿಸಲಿದೆ ಎಂದು ಚಿತ್ರದ ನಿರ್ಮಾಪಕ ಕರಣ್ ಜೋಹರ್ ಘೋಷಿಸಿದ್ದಾರೆ.

'ಪೋಕಿರಿ' ಖ್ಯಾತಿಯ ಪುರಿ ಜಗನ್ನಾಥ್ ಚಿತ್ರವನ್ನು ನಿರ್ದೇಶಿಸಿದ್ದು, ಕರಣ್ ಜೋಹರ್ ಅವರ ಧರ್ಮ ಪ್ರೊಡಕ್ಷನ್ಸ್ ಜೊತೆಗೆ ನಿರ್ಮಾಣದಲ್ಲೂ ತೊಡಗಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.