ADVERTISEMENT

‘ಆರ್‌ಆರ್‌ಆರ್‌‘ ಸಿನಿಮಾ ತಿರಸ್ಕರಿಸಿದ್ದ ಸ್ಟಾರ್‌ ನಟಿಯರು ಇವರು..!

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2022, 11:56 IST
Last Updated 28 ಮಾರ್ಚ್ 2022, 11:56 IST
ಪೋಸ್ಟರ್‌
ಪೋಸ್ಟರ್‌   

ಹೈದರಾಬಾದ್‌: ರಾಜಮೌಳಿ ನಿರ್ದೇಶನದ ‘ಆರ್‌ಆರ್‌ಆರ್‌‘ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಗಳಿಕೆಯತ್ತ ಸಾಗಿದ್ದು ₹ 500 ಕೋಟಿ ಕ್ಲಬ್‌ ಸೇರಿದೆ. ಈ ಬೆನ್ನಲ್ಲೇ ಸಿನಿಮಾದಲ್ಲಿ ಅಭಿನಯ ಮಾಡಲು ತಿರಸ್ಕರಿಸಿದ್ದ ಖ್ಯಾತ ನಟಿಯರ ಹೆಸರುಗಳು ಟಾಲಿವುಡ್‌ ಅಂಗಳದಲ್ಲಿ ಹರಿದಾಡುತ್ತಿವೆ.

‘ಆರ್‌ಆರ್‌ಆರ್‌‘ನಲ್ಲಿ ಅಭಿನಯಿಸಲು ಬಾಲಿವುಡ್‌ ನಟಿಯರಾದ ಶ್ರದ್ಧಾ ಕಪೂರ್‌, ಪರಿಣಿತಿ ಚೋಪ್ರಾ, ಹಾಲಿವುಡ್‌ನ ಆ್ಯಮಿ ಜಾಕ್ಸನ್‌, ಎಡ್ಗರ್‌ ಜೋನ್ಸ್‌ ಅವರನ್ನು ನಿರ್ದೇಶಕ ರಾಜಮೌಳಿ ಸಂಪರ್ಕ ಮಾಡಿದ್ದರು. ವಿವಿಧ ಕಾರಣಗಳಿಂದ ಈ ನಟಿಯರು ಸಿನಿಮಾದಲ್ಲಿ ನಟಿಸಲು ತಿರಸ್ಕರಿಸಿದ್ದರು.

ಪ್ರಭಾಸ್‌ ಅಭಿನಯದ ‘ಸಾಹೋ‘ ಸಿನಿಮಾದ ಮೂಲಕ ಟಾಲಿವುಡ್‌ಗೆ ಬಂದಿದ್ದ ಶ್ರದ್ಧಾ ಕಪೂರ್‌ ಬಾಲಿವುಡ್‌ನ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದರಿಂದ ಚಿತ್ರೀಕರಣಕ್ಕೆ ಡೇಟ್‌ ಹೊಂದಿಸಲು ಸಾಧ್ಯವಾಗದೇ ಈ ಚಿತ್ರವನ್ನು ತಿರಸ್ಕರಿಸಿದ್ದರು ಎಂದು ಶ್ರದ್ದಾ ಕಪೂರ್ ಮ್ಯಾನೇಜರ್‌ ತಿಳಿಸಿದ್ದಾರೆ.

ADVERTISEMENT

ಪರಿಣಿತಿ ಚೋಪ್ರಾ ಕೂಡ ಡೇಟ್‌ ಸಮಸ್ಯೆಯಿಂದ ಸಿನಿಮಾ ಕೈಬಿಡಲಾಯಿತು ಎಂದು ಚಿತ್ರದ ಪ್ರಚಾರ ಕಾರ್ಯಕ್ರಮದಲ್ಲಿಹೇಳಿದ್ದರು. ಪರಿಣಿತಿ ಒಂದು ವಾರ ಚಿತ್ರೀಕರಣಕ್ಕೆ ಅವಕಾಶ ಕೋರಿದ್ದರು. ಆದರ ಚಿತ್ರತಂಡಕ್ಕೆ ದಿನಾಂಕಹೊಂದಿಸಿಕೊಳ್ಳಲು ಸಮಸ್ಯೆಯಾಗಿದ್ದರಿಂದ ಅವರನ್ನು ಕೈಬಿಡಲಾಗಿತ್ತು.

ಆ್ಯಮಿ ಜಾಕ್ಸನ್‌ ಅವರನ್ನು ‘ಆರ್‌ಆರ್‌ಆರ್‌‘ ತಂಡ ಸಂಪರ್ಕ ಮಾಡಿತ್ತು. ಆದರೆ ಅವರು ಗರ್ಭೀಣಿಯಾಗಿದ್ದರಿಂದ ಚಿತ್ರದಲ್ಲಿ ನಟಿಸಲು ನಿರಾಕರಿಸಿದ್ದರುಎಂದು ಚಿತ್ರತಂಡ ಈ ಹಿಂದೆ ಮಾಹಿತಿ ನೀಡಿತ್ತು.

ಬ್ರಿಟಿಷ್‌ ನಟಿ ಎಡ್ಗರ್‌ ಜೋನ್ಸ್‌ ಹಾಲಿವುಡ್‌ ಚಿತ್ರಗಳಲ್ಲಿ ಬ್ಯುಸಿಯಾಗಿದ್ದರಿಂದ ಅವರು ಕೂಡ ಸಿನಿಮಾದಿಂದ ದೂರ ಸರಿದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.