
ಎಂ.ಬಿ ಕ್ರಿಯೇಷನ್ಸ್ ಬ್ಯಾನರ್‌ನಡಿಯಲ್ಲಿ ಮೋಹನ್ ಬಾಬು ನಿರ್ಮಾಣ ಮಾಡಿರುವ, ಜೈಶ್ ನಿರ್ದೇಶನದ ‘ಲವ್ ಕೇಸ್’ ಸಿನಿಮಾ ಇತ್ತೀಚೆಗೆ ಸೆಟ್ಟೇರಿತು.
ಶ್ರೀನಗರ ಕಿಟ್ಟಿ, ‘ಟಗರುಪಲ್ಯ’ ಖ್ಯಾತಿಯ ನಾಗಭೂಷಣ್ , ಸಾಯಿಕುಮಾರ್, ಸುಧಾರಾಣಿ, ಪ್ರಮೋದ್ ಶೆಟ್ಟಿ, ‘ಮಹಾನಟಿ’ ಖ್ಯಾತಿಯ ವಂಶಿ, ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ..’ ಖ್ಯಾತಿಯ ರಂಜನ್ ಈ ಸಿನಿಮಾದಲ್ಲಿ ಮುಖ್ಯಭೂಮಿಕೆಯಲ್ಲಿದ್ದಾರೆ. ‘ಪ್ಯೂರ್ ಲವ್ ಸ್ಟೋರಿ’ ಎನ್ನುವ ಅಡಿ ಬರಹವಿರುವ ಈ ಚಿತ್ರಕ್ಕೆ ವಿ.ಹರಿಕೃಷ್ಣ ಅವರ ಪುತ್ರ ಆದಿ ಹರಿಕೃಷ್ಣ ಸಂಗೀತ ಸಂಯೋಜಿಸುತ್ತಿದ್ದಾರೆ. ಮಾಸ್ತಿ ಸಂಭಾಷಣೆ ‘ಲವ್ ಕೇಸ್’ ಚಿತ್ರಕ್ಕಿದ್ದು, ಕೆ.ಎಸ್ ಚಂದ್ರಶೇಖರ್ ಛಾಯಾಚಿತ್ರಗ್ರಹಣ, ಅನುಕೃಷ್ಣ ಸಂಕಲನ ಚಿತ್ರಕ್ಕಿದೆ.
ಜೀ ಕನ್ನಡದಲ್ಲಿ ಆರು ವರ್ಷ ರಿಯಾಲಿಟಿ ಶೋಗಳಲ್ಲಿ ಕೆಲಸ ಮಾಡಿದ ಅನುಭವವಿರುವ ಜೈಶ್ ನಿರ್ದೇಶನದ ಚೊಚ್ಚಲ ಸಿನಿಮಾವಿದು. ಈ ಸಿನಿಮಾ ಮೂಲಕ ವಂಶಿ ಚಿತ್ರರಂಗಕ್ಕೆ ಕಾಲಿಡುತ್ತಿದ್ದು, ನಟ ಪ್ರಮೋದ್ ಶೆಟ್ಟಿ ಈ ಸಿನಿಮಾದಲ್ಲಿ ವಕೀಲನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ನಿಷ್ಕಲ್ಮಶವಾದ ಪ್ರೇಮಕಥೆ ಇದಾಗಿದ್ದು ನ.18ರಿಂದ ನಾನು ಚಿತ್ರೀಕರಣದಲ್ಲಿ ಭಾಗವಹಿಸಲಿದ್ದೇನೆ. ಐದು ತಿಂಗಳೊಳಗಾಗಿ ಈ ಸಿನಿಮಾವನ್ನು ತೆರೆಗೆ ತರುವ ಯೋಜನೆಯಿದೆ.ಶ್ರೀನಗರ ಕಿಟ್ಟಿ , ನಟ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.