
ನಟ ಡಾರ್ಲಿಂಗ್ ಕೃಷ್ಣ ಹಾಗೂ ನಟಿ ಮಿಲನಾ ನಾಗರಾಜ್ ಸಿನಿಪಯಣಕ್ಕೆ ದೊಡ್ಡ ತಿರುವು ನೀಡಿದ ಸಿನಿಮಾ ‘ಲವ್ ಮಾಕ್ಟೇಲ್’. ಈ ಸಿನಿಮಾದ ಮೂರನೇ ಭಾಗ ಏ.10ರಂದು ತೆರೆಕಾಣುತ್ತಿದ್ದು, ಚಿತ್ರದ ಎರಡನೇ ಹಾಡು ‘ಒಬ್ಬಂಟಿಯಾದೆ ನಾ’ ಇತ್ತೀಚೆಗೆ ಬಿಡುಗಡೆಯಾಗಿದೆ.
ಡಾರ್ಲಿಂಗ್ ಕೃಷ್ಣ ನಿರ್ದೇಶನ ಮಾಡಿ ನಾಯಕನಾಗಿಯೂ ನಟಿಸಿರುವ ಈ ಚಿತ್ರದಲ್ಲಿ ಅಪ್ಪ–ಮಗಳ ಬಾಂಧವ್ಯದ ಕಥೆಯಿದೆ.
‘ಮಾತು ಮೌನವಾಗಿದೆ ಶೋಕ ಭಾವ ಮೂಡಿದೆ..’ ಎಂಬ ಸಾಲಿನೊಂದಿಗೆ ಶುರುವಾಗುವ ಈ ಹಾಡನ್ನು ರಾಘವೇಂದ್ರ ಕಾಮತ್ ಬರೆದಿದ್ದಾರೆ. ನಕುಲ್ ಅಭಯಂಕರ್ ಸಂಗೀತ ಸಂಯೋಜನೆ ಮಾಡಿ, ದನಿಯಾಗಿದ್ದಾರೆ. ಸಿನಿಮಾದ ಎರಡೂ ಭಾಗಗಳಲ್ಲಿ ಹಾಡುಗಳಿಗೆ ಹೆಚ್ಚಿನ ಒತ್ತು ನೀಡಲಾಗಿತ್ತು. ಈ ಭಾಗದಲ್ಲೂ ಅದು ಮುಂದುವರಿದಿದೆ.
‘ಕ್ರಿಸ್ಮಿ’ ಬ್ಯಾನರ್‌ನಡಿಯಲ್ಲಿ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಡಾರ್ಲಿಂಗ್ ಕೃಷ್ಣ, ಮಿಲನಾ ನಾಗರಾಜ್, ಸಂವೃತ, ಅಮೃತಾ ಅಯ್ಯಂಗಾರ್, ರೇಚಲ್ ಡೇವಿಡ್, ಅಭಿಲಾಶ್ ದಳಪತಿ ಮುಂತಾದವರು ತಾರಾಬಳಗದಲ್ಲಿದ್ದಾರೆ. ಸಿನಿಮಾದ ಆಡಿಯೊ ಹಕ್ಕುಗಳನ್ನು ಆನಂದ್ ಆಡಿಯೊ ಖರೀಸಿದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.