Maa Trailer: ಕಾಜೋಲ್ ನಟನೆಯ ಹಾರರ್ ಚಿತ್ರ 'ಮಾ' ಟ್ರೇಲರ್ ಬಿಡುಗಡೆ
ಬೆಂಗಳೂರು: ಬಾಲಿವುಡ್ ನಟಿ ಕಾಜೋಲ್ ಮುಖ್ಯಪಾತ್ರದಲ್ಲಿರುವ ಹಾರರ್, ಸಸ್ಪೆನ್ಸ್ ಥ್ರಿಲ್ಲರ್ ‘ಮಾ’ ಚಿತ್ರದ ಟ್ರೇಲರ್ ಇಂದು ಬಿಡುಗಡೆಯಾಗಿದೆ.
ಜಿಯೊ ಸ್ಟುಡಿಯೊ ಹಾಗೂ ದೇವಗನ್ ಫಿಲ್ಮ್ಸ್ ಜಂಟಿಯಾಗಿ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದು, ವಿಶಾಲ್ ಫುರಿಯಾ ಅವರು ನಿರ್ದೇಶನ ಮಾಡಿದ್ದಾರೆ.
ಕಳೆದ ವರ್ಷ ಬಿಡುಗಡೆಯಾಗಿದ್ದ ಸೈತಾನ್ ಸಿನಿಮಾದೊಂದಿಗೆ ಮಾ ಸಿನಿಮಾ ನಂಟು ಹೊಂದಿದೆ ಎಂದು ಹೇಳಲಾಗಿದೆ. ಅಜಯ್ ದೇವಗನ್ ಹಾಗೂ ಆರ್. ಮಾಧವನ್ ಅವರ ಹಾರರ್ ಚಿತ್ರವಾಗಿದ್ದ ಸೈತಾನ್ ಸಿನಿಪ್ರಿಯರ ಗಮನ ಸೆಳೆದಿತ್ತು.
ಕಾಜೋಲ್ ಅವರ ಜೊತೆ ರೋನಿತ್, ಇಂದ್ರನೇಲ್, ಖೇರಿನ್, ಜಿತಿನ್ ತಾರಾಗಣದಲ್ಲಿದ್ದಾರೆ. ಮಾ ಚಿತ್ರ ಜೂನ್ 27 ಕ್ಕೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.