ADVERTISEMENT

Maaran Trailer: ಮಾರನ್ ಟ್ರೈಲರ್ ಬಿಡುಗಡೆ: ತನಿಖಾ ಪತ್ರಕರ್ತನಾಗಿ ಧನುಷ್ ಮಿಂಚು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 2 ಮಾರ್ಚ್ 2022, 11:09 IST
Last Updated 2 ಮಾರ್ಚ್ 2022, 11:09 IST
ಮಾರನ್
ಮಾರನ್    

ಬೆಂಗಳೂರು: ನಟ ಧನುಷ್ ತನಿಖಾ ಪತ್ರಕರ್ತನ ಪಾತ್ರದಲ್ಲಿ ನಟಿಸುತ್ತಿರುವ ಆ್ಯಕ್ಷನ್ ಥ್ರಿಲ್ಲರ್ ಕಥಾ ಹಂದರವನ್ನು ಹೊಂದಿರುವ ‘ಮಾರನ್’ ಸಿನಿಮಾ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರದಲ್ಲಿ ಧನುಷ್ ಪಾತ್ರದ ಬಗ್ಗೆ ಸಿನಿಮಾ ಪ್ರೇಮಿಗಳಿಗೆ ಕುತೂಹಲ ಹುಟ್ಟುವಂತೆ ಮಾಡಿದೆ.

ಮಂಗಳವಾರ ಡಿಸ್ನಿ+ಹಾಟ್‌ಸ್ಟಾರ್‌ ಯೂಟ್ಯೂಬ್ ಚಾನೆಲ್‌ನಲ್ಲಿ ಟ್ರೈಲರ್ ಬಿಡುಗಡೆಯಾಗಿದೆ. ಮಾರ್ಚ್ 11 ರಂದು ನೇರವಾಗಿಡಿಸ್ನಿ+ಹಾಟ್‌ಸ್ಟಾರ್‌ ಓಟಿಟಿಯಲ್ಲಿ ಮಾರನ್ ಕನ್ನಡ. ತೆಲುಗು, ತಮಿಳು, ಮಲೆಯಾಳಿ ಭಾಷೆಯಲ್ಲಿ ಬಿಡುಗಡೆಯಾಗಲಿದೆ.

ಧನುಷ್ ಈ ಚಿತ್ರದಲ್ಲಿ ತನಿಖಾ ಪತ್ರಕರ್ತನಾಗಿ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ.ಧನುಷ್‌ಗೆ ಜೊತೆಯಾಗಿ ನಟಿ ಮಾಳವಿಕಾ ಮೋಹನನ್ ನಟಿಸಿದ್ದು, ಸಮುದ್ರಕಣಿ, ಸ್ಮೃತಿ ವೆಂಕಟ್, ಕೃಷ್ಣಕುಮಾರ್ ಬಾಲಸುಬ್ರಮಣಿಯನ್ ಹಾಗೂ ಮಹೇಂದ್ರನ್ ಅವರ ತಾರಾಗಣವಿದೆ.

ADVERTISEMENT

ಸಿನಿಮಾವನ್ನು ಕಾರ್ತಿಕ್ ನರೇನ್ ನಿರ್ದೇಶಿಸಿದ್ದು, ಸತ್ಯಜ್ಯೋತಿ ಫಿಲ್ಮಂ ಬ್ಯಾನರ್ ಅಡಿ ಟಿ.ಜಿ ತ್ಯಾಗರಾಜನ್ ನಿರ್ಮಾಣ ಮಾಡಿದ್ದಾರೆ. ಧನುಷ್ ಅಭಿನಯದ ‘ಅತ್ರಂಗಿರೇ’ ಸಿನಿಮಾ ಕೂಡ ನೇರವಾಗಿ ಹಾಟ್‌ಸ್ಟಾರ್‌ನಲ್ಲಿ ಬಿಡುಗಡೆಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.