ADVERTISEMENT

‘ಮದಗಜ’ನಿಗೆ ₹80 ಸಾವಿರ ವೆಚ್ಚದ ಸೇಬಿನ ಹಾರ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2021, 13:26 IST
Last Updated 2 ಡಿಸೆಂಬರ್ 2021, 13:26 IST
ಶ್ರೀಮುರಳಿ
ಶ್ರೀಮುರಳಿ   

ರೋರಿಂಗ್‌ ಸ್ಟಾರ್‌ ಶ್ರೀಮುರಳಿ ನಟನೆಯ ‘ಮದಗಜ’ ಸಿನಿಮಾ ಡಿ.3ರಂದು ತೆರೆಕಾಣುತ್ತಿದೆ. ಬೆಂಗಳೂರಿನ ‘ಅನುಪಮ’ ಚಿತ್ರಮಂದಿರ ಮದಗಜ ಸಿನಿಮಾದ ಮೈನ್‌ ಥಿಯೇಟರ್‌ ಆಗಿದ್ದು,‘ಮದಗಜ’ನನ್ನು ₹80 ಸಾವಿರ ವೆಚ್ಚದ ಬೃಹತ್‌ ಸೇಬಿನ ಹಾರ ಹಾಕಿ ಅದ್ಧೂರಿಯಾಗಿ ಸ್ವಾಗತಿಸಲು ಶ್ರೀಮುರಳಿ ಅಭಿಮಾನಿಗಳ ಒಕ್ಕೂಟ ಸಿದ್ಧತೆ ನಡೆಸಿದೆ.

ಈ ಕುರಿತು ಚಿತ್ರದ ನಿರ್ದೇಶಕ ಮಹೇಶ್‌ ಕುಮಾರ್‌ ಇನ್‌ಸ್ಟಾಗ್ರಾಮ್‌ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ. ಶ್ರೀಮುರಳಿ ಅವರಿಗೆ ₹80 ಸಾವಿರದ ಬೃಹತ್‌ ಸೇಬಿನ ಹಾರ ಹಾಕಿ ಸ್ವಾಗತಿಸಲಾಗುವುದು. ಶ್ರೀಮುರಳಿ ಅವರ 21ನೇ ಸಿನಿಮಾ ಪ್ರಯುಕ್ತ, 21 ಕೆ.ಜಿ. ತೂಕದ ಕೇಕ್‌ ಕತ್ತರಿಸಿ, ₹21 ಸಾವಿರದ ಪಟಾಕಿ ಸಿಡಿಸಿ, ಶ್ರೀಮುರಳಿ ಕಟೌಟ್‌ಗೆ 21 ಕುಂಬಳಕಾಯಿ ಪೂಜೆ ಮಾಡಿ, 501 ಜನರಿಗೆ ಮದಗಜ ಟಿ–ಶರ್ಟ್‌ ಹಂಚಲು ಒಕ್ಕೂಟ ನಿರ್ಧರಿಸಿದೆ. ಮೊದಲ ದಿನ ಚಿತ್ರ ನೋಡಲು ಬಂದ ಪ್ರೇಕ್ಷಕರಿಗೆ ಅನ್ನ ಸಂತರ್ಪಣೆ ಇರಲಿದ್ದು, ರಕ್ತದಾನ ಶಿಬಿರವನ್ನೂ ಒಕ್ಕೂಟ ಆಯೋಜಿಸಲಿದೆ.

‘ಮದಗಜ’ ಸಿನಿಮಾ ರಾಜ್ಯದ 550ಕ್ಕೂ ಅಧಿಕ ಚಿತ್ರಮಂದಿರಗಳ 800ಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ ತೆರೆ ಕಾಣಲಿದ್ದು, ಶ್ರೀಮುರಳಿಗೆ ಆಶಿಕಾ ರಂಗನಾಥ್‌ ಜೋಡಿಯಾಗಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.