ADVERTISEMENT

₹ 59 ಕೋಟಿ ಬಾಚಿದ ‘ಮಹರ್ಷಿ’

​ಪ್ರಜಾವಾಣಿ ವಾರ್ತೆ
Published 12 ಮೇ 2019, 13:21 IST
Last Updated 12 ಮೇ 2019, 13:21 IST
ಮಹೇಶ್ ಬಾಬು
ಮಹೇಶ್ ಬಾಬು   

ಬಿಡುಗಡೆಯಾದ ಮೊದಲ ದಿನವೇ ನಟ ಮಹೇಶ್ ಬಾಬು ಅಭಿನಯದ ‘ಮಹರ್ಷಿ’ ಚಿತ್ರ ಬಾಕ್ಸ್‌ಅಫೀಸ್‌ನಲ್ಲಿ ದೊಡ್ಡ ಸದ್ದು ಮಾಡಿದೆ. ವಿಶ್ವದಾದ್ಯಂತ ₹59 ಕೋಟಿ ಕಲೆಕ್ಷನ್ ಮಾಡಿದೆ. ಆರಂಭದ ದಿನ ಹೆಚ್ಚು ಗಳಿಕೆ ದಾಖಲಿಸಿದ ಅವರ ಚಿತ್ರಗಳಲ್ಲಿ ಇದು ಮೊದಲಿಗೆ ನಿಲ್ಲುತ್ತದೆ ಎನ್ನುತ್ತಾರೆ ವಿಶ್ಲೇಷಕ ತ್ರಿನಾಥ್. ಆಂಧ್ರ ಹಾಗೂ ತೆಲಂಗಾಣದಲ್ಲೇ ₹25 ಕೋಟಿ ಬಾಚಿದೆ.

‘ಅನೆ ನೇನು’ ಚಿತ್ರ ಮೊಲದ ದಿನ ₹54 ಕೋಟಿ ಗಳಿಸಿತ್ತು.ಬಿಡುಗಡೆಗೂ ಮುನ್ನವೇ ಈ ಸಿನಿಮಾ ₹150 ಕೋಟಿ ವ್ಯವಹಾರ ಮುಗಿಸಿತ್ತು. ಪೂಜಾ ಹೆಗ್ಡೆ, ಅಲ್ಲರಿ ನರೇಶ್ ಹಾಗೂ ಜಗಪತಿ ಬಾಬು ಅವರು ಮುಖ್ಯಭೂಮಿಕೆಯಲ್ಲಿದ್ದಾರೆ. ವಂಶಿ ನಿರ್ದೇಶನದ ಈ ಚಿತ್ರದಲ್ಲಿ ಕೋಟ್ಯಧಿಪತಿ ರಿಷಿ ಆಗಿ ಮಹೇಶ್ ಬಾಬು ಕಾಣಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT